ಶಿವರಾಂಪೇಟೆ ರಸ್ತೆಯ ಮೂರು ಅಂಗಡಿಗಳಲ್ಲಿ 1.85 ಲಕ್ಷ ರೂ. ನಗದು ಕಳವು
ಮೈಸೂರು

ಶಿವರಾಂಪೇಟೆ ರಸ್ತೆಯ ಮೂರು ಅಂಗಡಿಗಳಲ್ಲಿ 1.85 ಲಕ್ಷ ರೂ. ನಗದು ಕಳವು

October 5, 2018

ಮೈಸೂರು: ಮೂರು ಅಂಗಡಿಗಳ ಬಾಗಿಲು ಮುರಿದು 1.85 ಲಕ್ಷ ರೂ. ನಗದು ಕಳವು ಮಾಡಿರುವ ಘಟನೆ ಮೈಸೂರಿನ ಶಿವರಾಂಪೇಟೆ ರಸ್ತೆಯ ಮನ್ನಾರ್ಸ್ ಮಾರ್ಕೆಟ್ ಎದುರು ಕಳೆದ ರಾತ್ರಿ ಸಂಭವಿಸಿದೆ.

ಪ್ರಕಾಶ ಜೈನ್ ಎಂಬುವರ ಕಮಲ್ ಸೂಪರ್ ಬಜಾರ್, ಪ್ರತಾಪ್ ಚಂದ್ ಅವ ರಿಗೆ ಸೇರಿದ ಮಾರುತಿ ಟಾಯ್ಸ್ ಅಂಗಡಿ ಹಾಗೂ ಚಂದ್ರಶೇಖರ್ ಅವರ ವಂದನಾ ಎಂಟರ್‌ಪ್ರೈಸಸ್‌ಗಳಿಗೆ  ಖದೀಮರು ಲಗ್ಗೆ ಹಾಕಿ ನಗದು ಕಳವು ಮಾಡಿದ್ದಾರೆ.

ಹಿಂಬದಿಯ ಆಂಜನೇಯ ಸ್ವಾಮಿ ದೇವ ಸ್ಥಾನದ ಕಡೆಯಿಂದ ಬಂದು ಒಂದೇ ಕಟ್ಟಡ ದಲ್ಲಿರುವ ಮೂರು ಅಂಗಡಿಗಳ ಬಾಗಿಲು ಮೀಟಿ ಒಳಗೆ ನುಸುಳಿದ ಕಳ್ಳರು, ವಂದನಾ ಎಂಟರ್‌ಪ್ರೈಸಸ್‌ನಲ್ಲಿ 1,50,000 ರೂ. ಕಮಲ್ ಸೂಪರ್ ಬಜಾರ್‍ನಲ್ಲಿ 25,000 ರೂ. ಹಾಗೂ ಮಾರುತಿ ಗೊಂಬೆಗಳ ಅಂಗಡಿಯಲ್ಲಿ 10,000 ರೂ. ನಗದು ಅಪಹರಿಸಿದ್ದಾರೆಂಬುದು ಪ್ರಾಥಮಿಕ ಮಹಜರು ವರದಿಯಿಂದ ತಿಳಿದು ಬಂದಿದೆ. ಇಂದು ಬೆಳಿಗ್ಗೆ ಅಂಗಡಿ ಬಾಗಿಲು ತೆರೆಯ ಲೆಂದು ಮಾಲೀಕರು ಬಂದಾಗ ಕಳ್ಳತನವಾಗಿರುವುದು ಕಂಡಿತು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ದೇವ ರಾಜ ಠಾಣೆ ಇನ್ಸ್‍ಪೆಕ್ಟರ್ ತಿಮ್ಮರಾಜು ಹಾಗೂ ಸಿಬ್ಬಂದಿ ಮಹಜರು ನಡೆಸಿದರು.

ಬೆರಳಚ್ಚು ಮುದ್ರ ಘಟಕದ ಎಸಿಪಿ ರಾಜಶೇಖರ್, ಸಬ್ ಇನ್ಸ್‍ಪೆಕ್ಟರ್ ಅಪ್ಪಾಜಿ ಗೌಡ, ಶ್ವಾನದಳದ ಸಿಬ್ಬಂದಿ ಸಹ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀ ಸರು, ಸಿಸಿ ಕ್ಯಾಮರಾ ಫುಟೇಜಸ್ ಪಡೆದು ತನಿಖೆ ಆರಂಭಿಸಿದ್ದಾರೆ

Translate »