ಮೈಸೂರು: ದೇಸೀಯ ಕೈಗಾರಿಕೆಗಳಿಗೆ ಸಿಎಸ್‍ಐಆರ್ ಪ್ರಯೋ ಗಾಲಯದಲ್ಲಿ ಅಭಿವೃದ್ಧಿಗೊಂಡು ವರ್ಗಾ ವಣೆಗೊಂಡ ತಂತ್ರಜ್ಞಾನವನ್ನು ಬಳಸ ಲಾಗುತ್ತಿದೆ ಎಂದು ಸಿಎಫ್‍ಟಿಆರ್‍ಐನ ಪ್ರಧಾನ ವಿಜ್ಞಾನಿ ಡಾ.ಆರ್.ಸುಬ್ರಹ್ಮಣ್ಯನ್ ಅವರು ಇಂದಿಲ್ಲಿ ತಿಳಿಸಿದ್ದಾರೆ. ಸಿಎಫ್‍ಟಿಆರ್‍ಐ ಆವರಣದಲ್ಲಿರುವ ಐಎಫ್‍ಟಿಟಿಸಿ ಸಭಾಂಗಣದಲ್ಲಿ ಏರ್ಪಡಿ ಸಿದ್ದ ಸಿಎಸ್‍ಐಆರ್-ಸಿಎಫ್‍ಟಿಆರ್‍ಐ ಸಂಸ್ಥಾಪನಾ ದಿನಾಚರಣೆ ಮತ್ತು ಮುಕ್ತದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಆಹಾರ ಭದ್ರತೆ ಮತ್ತು ದೇಶದ ಅಭಿವೃದ್ಧಿಗೆ ಸಂಶೋಧನೆ ಅಭಿವೃದ್ಧಿ ಮಾಡಿ ಕೊಡುಗೆ ನೀಡುತ್ತಿರುವ ಸಿಎಫ್‍ಟಿಆರ್‍ಐ ತನ್ನ ಪ್ರಯೋಗಾಲಯ ದಲ್ಲಿ ಹೊರಬಂದ ತಂತ್ರಜ್ಞಾನವನ್ನು ದೇಸೀಯ ಕೈಗಾರಿಕೆಗಳ(Domestic Industries)…