ಮೈಸೂರು: ದೇಸೀಯ ಕೈಗಾರಿಕೆಗಳಿಗೆ ಸಿಎಸ್‍ಐಆರ್ ಪ್ರಯೋ ಗಾಲಯದಲ್ಲಿ ಅಭಿವೃದ್ಧಿಗೊಂಡು ವರ್ಗಾ ವಣೆಗೊಂಡ ತಂತ್ರಜ್ಞಾನವನ್ನು ಬಳಸ ಲಾಗುತ್ತಿದೆ ಎಂದು ಸಿಎಫ್‍ಟಿಆರ್‍ಐನ ಪ್ರಧಾನ ವಿಜ್ಞಾನಿ ಡಾ.ಆರ್.ಸುಬ್ರಹ್ಮಣ್ಯನ್ ಅವರು ಇಂದಿಲ್ಲಿ ತಿಳಿಸಿದ್ದಾರೆ.
ಸಿಎಫ್‍ಟಿಆರ್‍ಐ ಆವರಣದಲ್ಲಿರುವ ಐಎಫ್‍ಟಿಟಿಸಿ ಸಭಾಂಗಣದಲ್ಲಿ ಏರ್ಪಡಿ ಸಿದ್ದ ಸಿಎಸ್‍ಐಆರ್-ಸಿಎಫ್‍ಟಿಆರ್‍ಐ ಸಂಸ್ಥಾಪನಾ ದಿನಾಚರಣೆ ಮತ್ತು ಮುಕ್ತದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಆಹಾರ ಭದ್ರತೆ ಮತ್ತು ದೇಶದ ಅಭಿವೃದ್ಧಿಗೆ ಸಂಶೋಧನೆ ಅಭಿವೃದ್ಧಿ ಮಾಡಿ ಕೊಡುಗೆ ನೀಡುತ್ತಿರುವ ಸಿಎಫ್‍ಟಿಆರ್‍ಐ ತನ್ನ ಪ್ರಯೋಗಾಲಯ ದಲ್ಲಿ ಹೊರಬಂದ ತಂತ್ರಜ್ಞಾನವನ್ನು ದೇಸೀಯ ಕೈಗಾರಿಕೆಗಳ(Domestic Industries) ಅಭಿವೃದ್ಧಿಗೂ ಬಳಸುತ್ತಿದೆ ಎಂದರು.
ರಾಗಿ ಮುದ್ದೆ ತಯಾರಿಸುವ ಯಂತ್ರ, ಮಾರಿಂಗ್ ಸೀಡ್ ಪ್ರೋಟಿನ್ ಸೇರಿದಂತೆ 8 ಹೊಸ ತಂತ್ರಜ್ಞಾನವನ್ನು ದೇಶಕ್ಕೆ ಸಮ ರ್ಪಿಸಿರುವ ಸಂಸ್ಥೆಯು, Scimago ಇನ್ ಸ್ಟಿಟ್ಯೂಷನ್‍ಗಳ ರ್ಯಾಂಕಿಂಗ್ ಪ್ರಕಾರ ಸಿಎಫ್ ಟಿಆರ್‍ಐ 2017ರಲ್ಲಿದ್ದ 32ನೇ ಸ್ಥಾನ ದಿಂದ 2018ನೇ ಸಾಲಿನಲ್ಲಿ 270 ಸಂಸ್ಥೆ ಗಳ ಪೈಕಿ 16ನೇ ಸ್ಥಾನಕ್ಕೆ ಬಂದಿರುವುದು ಪ್ರಶಂಸನೀಯ ಎಂದು ನುಡಿದರು.
ಇತ್ತೀಚೆಗೆ ಪ್ರಕೃತಿ ವಿಕೋಪಕ್ಕೆ ಸಿಲುಕಿದ್ದ ಕೊಡಗು, ವಯನಾಡು, ತ್ರಿಷೂರ್ ಮತ್ತು ಕೊಚ್ಚಿನ್‍ಗೆ 55,700 ಆಹಾರದ ಪೊಟ್ಟಣ ಮತ್ತು 15.6 ಟನ್ ಆಹಾರ ಪದಾರ್ಥ ಗಳನ್ನು ಪೂರೈಸುವ ಮೂಲಕ ಸಂತ್ರಸ್ತರಿಗೆ ನೆರವು ನೀಡಿದೆ ಎಂದು ಡಾ.ಸುಬ್ರಹ್ಮಣ್ಯನ್ ಅವರು, ಫಾರ್ಮರ್-ಸೆಂಟ್ರಿಕ್ ಪ್ರೋಗ್ರಾಮ್, ಎಸ್‍ಟಿಐ ಮತ್ತು ಎಸ್‍ಟಿಸಿಗಳ ಮೂಲಕ ಸುಮಾರು 1 ಸಾವಿರ ಮಂದಿಗೆ ತರಬೇತಿ ನೀಡಿ ಪ್ರಧಾನಮಂತ್ರಿಗಳ ‘ಮೇಕ್-ಇನ್-ಇಂಡಿಯಾ’ ಅಭಿಯಾನದಲ್ಲಿ ಸಂಸ್ಥೆಯು ಕೈಜೋಡಿಸಿದೆ ಎಂದರು.
Nutri foods for Breakfast’ ಯೋಜನೆ, 7ರಿಂದ 15 ವರ್ಷದೊಳಗಿನ ಶಾಲಾ ಮಕ್ಕಳಿಗೆ ಅಗತ್ಯವಿರುವ ಮಿನರಲ್ಸ್ ಅನ್ನು ಒದಗಿಸುವ ಕಾರ್ಯಕ್ರಮವು ಸಿಎಫ್ ಟಿಆರ್‍ಐನ ಸಾಧನೆಯ ಪ್ರತೀಕವಾಗಿದ್ದು, ಹ್ಯಾಂಗೋ ಟೆಕ್ನಾಲಜಿ, ಬೇಬಿ ಫುಡ್, ಸಾಂಪ್ರದಾಯಿಕ ಆಹಾರ ಸಂರಕ್ಷಣೆಯಂತಹ ಹಲವು ಮಹತ್ತರ ಯೋಜನೆಗಳನ್ನು ದೇಶದ ಪ್ರಗತಿಗೆ ನೀಡಿದೆ ಎಂದು ಅವರು ಇದೇ ಸಂದರ್ಭ ನುಡಿದರು.
ಎಮ್ಮೆ ಹಾಲಿನಿಂದ ಬೇಬಿ ಮಿಲ್ಕ್ ಪೌಡರ್, 2 ಆಸನದ ಟ್ರೇನರ್ ಏರ್‍ಕ್ರಾಫ್ಟ್ ಊಂಓSಂ, ಸ್ವರಾಜ್ ಟ್ರಾಕ್ಟರ್ ಮೂಲಕ ಹಸಿರು ಕ್ರಾಂತಿ ಸೇರಿದಂತೆ ಹಲವು ಮಹತ್ತರ ಸಂಶೋಧ ನಾತ್ಮಕ ತಂತ್ರಜ್ಞಾನವನ್ನು ದೇಶಕ್ಕೆ ಸಿಎಫ್ ಟಿಆರ್‍ಐ ನೀಡುತ್ತಿದೆ ಎಂದೂ ಡಾ. ಸುಬ್ರಹ್ಮಣ್ಯನ್ ಅವರು ತಿಳಿಸಿದರು.
ಡಿಎಫ್‍ಆರ್‍ಎಲ್ ನಿರ್ದೇಶಕ ಡಾ. ಅನಿಲ್ ಡಿ.ಸಮ್ಪೂಲ್ ಅವರು ಕಾರ್ಯ ಕ್ರಮ ಉದ್ಘಾಟಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹು ಮಾನ ವಿತರಿಸಿದರಲ್ಲದೆ, ಸಿಎಫ್‍ಟಿ ಆರ್‍ಐ ಕೂಡ ಮಾಡುವ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಸಿಎಫ್‍ಟಿಆರ್‍ಐ ನಿರ್ದೇಶಕ ಡಾ. ಕೆಎಸ್‍ಎಂಎಸ್ ರಾಘವರಾವ್ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಸಂಸದ ಪ್ರತಾಪ್‍ಸಿಂಹ ಅವರ ಪತ್ನಿ ಶ್ರೀಮತಿ ಅರ್ಪಿತಾ ಸಿಂಹ, ಪ್ರಧಾನ ವಿಜ್ಞಾನಿಗಳಾದ ಡಾ.ಜಿ.ವೆಂಕಟೇಶ್ವರನ್, ಡಾ.ಕೆ.ವೆಂಕಟೇಶ್‍ಮೂರ್ತಿ, ಡಾ.ಆರ್. ಶಾರದಾ, ಆಡಳಿತಾಧಿಕಾರಿ ಡಿಜೆಎನ್ ಪ್ರಸಾದ್ ಅವರು ಭಾಗವಹಿಸಿದ್ದರು.
ಇದೇ ವೇಳೆ ವಿಜಿಲೆನ್ಸ್ ವೀಕ್ ಅಂಗವಾಗಿ ಭ್ರಷ್ಟಾಚಾರ ವಿರುದ್ಧ ಹೋರಾಡುವು ದಾಗಿ ಕಾರ್ಯಕ್ರಮದಲ್ಲಿ ನೆರೆದಿದ್ದ ಸರ್ವ ರಿಗೂ ಪ್ರತಿಜ್ಞಾವಿಧಿ ಬೋಧಿಸಲಾಯಿತು.