ಮೊದಲ ಪತ್ನಿ ನಾಗರತ್ನರಿಂದ ವಿಚ್ಛೇದನ ಪಡೆಯಲು ದುನಿಯಾ ವಿಜಯ್ ಅರ್ಜಿ
ಮೈಸೂರು

ಮೊದಲ ಪತ್ನಿ ನಾಗರತ್ನರಿಂದ ವಿಚ್ಛೇದನ ಪಡೆಯಲು ದುನಿಯಾ ವಿಜಯ್ ಅರ್ಜಿ

October 30, 2018

ಬೆಂಗಳೂರು:  ತನ್ನ ಮೊದಲ ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ಪಡೆ ಯಲು ಚಿತ್ರನಟ ದುನಿಯಾ ವಿಜಯ್ ಅವರು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆಯೂ ಸಹ ವಿಚ್ಛೇದನಕ್ಕಾಗಿ ದುನಿಯಾ ವಿಜಯ್ ಅರ್ಜಿ ಸಲ್ಲಿಸಿದ್ದರು. ಆದರೆ, ಆಗ ಸಂಧಾನ ಏರ್ಪಟ್ಟು ಅರ್ಜಿಯನ್ನು ಹಿಂಪಡೆದಿದ್ದರು ಎಂದು ಹೇಳಲಾಗಿದೆ. ದುನಿಯಾ ವಿಜಯ್ ತನ್ನ ಮೊದಲ ಪತ್ನಿಯಿಂದ ವಿಚ್ಛೇದನ ಪಡೆಯದೇ ಕೀರ್ತಿಗೌಡ ಅವರನ್ನು ವಿವಾಹವಾಗಿದ್ದು, ವಿವಾದಕ್ಕೆ ಕಾರಣವಾಗಿತ್ತು.
ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ದುನಿಯಾ ವಿಜಯ್ ಜೈಲಿನಲ್ಲಿದ್ದಾಗ ಅವರ ಮೊದಲ ಪತ್ನಿ ನಾಗರತ್ನ ಅವರು ಕೀರ್ತಿಗೌಡ ಮನೆಗೆ ತೆರಳಿ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣವನ್ನು ಮುಂದಿಟ್ಟು, ಈಗ ವಿಜಯ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

Translate »