ದುನಿಯಾ ವಿಜಿ 2ನೇ ಪತ್ನಿ ಮೇಲೆ ಹಲ್ಲೆ; ಮೊದಲ ಪತ್ನಿ ವಿರುದ್ಧ ಎಫ್‍ಐಆರ್ 
ಮೈಸೂರು

ದುನಿಯಾ ವಿಜಿ 2ನೇ ಪತ್ನಿ ಮೇಲೆ ಹಲ್ಲೆ; ಮೊದಲ ಪತ್ನಿ ವಿರುದ್ಧ ಎಫ್‍ಐಆರ್ 

October 29, 2018

ಬೆಂಗಳೂರು: ನಟ ದುನಿಯಾ ವಿಜಯ್ ಅವರ ಎರಡನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ನಡೆಸಿದ ಪ್ರಕರಣ ದಲ್ಲಿ ಮೊದಲ ಪತ್ನಿ ನಾಗರತ್ನ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಕೀರ್ತಿಗೌಡ ನೀಡಿದ ದೂರಿನ ಮೇರೆಗೆ ಗಿರಿನಗರ ಪೆÇಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 326ರ ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಈಗಾ ಗಲೇ ನಾಗರತ್ನ ವಿರುದ್ಧ ಐಪಿಸಿ ಸೆಕ್ಷನ್ 306 ಮತ್ತು 309 ಅಡಿ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ 326ನೇ ಸೆಕ್ಷನ್ ಹಾಕಲು ನಿರ್ಧಾರ ಮಾಡಿದ್ದು, ಈ ಬಗ್ಗೆ ಕೋರ್ಟ್‍ಗೆ ಪೆÇಲೀಸರು ಮನವಿ ಮಾಡಲಿದ್ದಾರೆ. ಸೆಕ್ಷನ್ 326ರಡಿ ದೂರು ದಾಖಲಾಗಿರುವುದರಿಂದ ನಿರೀಕ್ಷಣಾ ಜಾಮೀನು ಸಿಗುವುದು ಕಷ್ಟ. ಯಾವುದೇ ಕ್ಷಣದಲ್ಲಾದರೂ ನಾಗರತ್ನ ಬಂಧನದ ಸಾಧ್ಯತೆ ಇದೆ. ಬಂಧನದ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ಪೊಲೀಸ್ ಮೂಲಗಳು ಹೇಳಿವೆ. ಈ ಮಧ್ಯೆ ನಾಗ ರತ್ನ ಬಂಧನ ಭೀತಿ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದಾರೆ.

Translate »