ಮೈಸೂರು: ಕರ್ನಾ ಟಕ ಪೊಲೀಸ್ ಇಲಾಖೆಯ ಮೈಸೂರು ಕಮೀ ಷನರೇಟ್ ವ್ಯಾಪ್ತಿಯ ಪೊಲೀಸರಿಂದ ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ `ರನ್ ಫಾರ್ ಯೂನಿಟಿ’, `ಮಾರ್ಚ್ ಫಾಸ್ಟ್’ ಮತ್ತು `ಬ್ಲಡ್ ಡೊನೇಷನ್’ ಕಾರ್ಯಕ್ರಮವನ್ನು ಅ.31 ರಂದು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಏಕತಾ ದಿನಾ ಚರಣೆ ಅಂಗವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾ ರದ ಆದೇಶದನ್ವಯ ಮಾಜಿ ಉಪಪ್ರಧಾನಿ ದಿವಂ ಗತ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ಅಂಗವಾಗಿ ವಿವಿಧ ಕಾರ್ಯಕ್ರಮ ಗಳನ್ನು ನಗರ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರ ರಾವ್, ಪೊಲೀಸ್ ಉಪ ಆಯುಕ್ತ (ಕಾನೂನು ಸುವ್ಯವಸ್ಥೆ) ಎನ್.ವಿಷ್ಣು ವರ್ಧನ್, ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಡಾ.ವಿಕ್ರಂ ವಿ.ಆಮಟೆ, ಸಿಎ ಆರ್‍ಡಿಸಿಪಿ ಬಸವರಾಜ್ ವಿ.ಕಿತ್ತೂರ್ ಹಾಗೂ ಅಲರ್ಟ್ ಸಿಟಿಜನ್ ಟೀಮ್‍ನ ಸದಸ್ಯರು ಭಾಗವಹಿಸಲಿದ್ದಾರೆ.
ಅ.31ರಂದು ಬೆಳಿಗ್ಗೆ 7 ಗಂಟೆಗೆ `ರನ್ ಫಾರ್ ಯೂನಿಟಿ’ ಕಾರ್ಯಕ್ರಮವನ್ನು ನಗರ ಪೊಲೀಸ್ ಇಲಾಖೆ ಮತ್ತು ಅಲರ್ಟ್ ಸಿಟಿಜನ್ ಟೀಮ್ (ಎಸಿಟಿ) ಸಹಯೋಗದೊಂದಿಗೆ ಆಚರಿಸಲಾಗು ತ್ತಿದೆ. ಇದರಲ್ಲಿ ಮೈಸೂರು ನಗರದ ವಿವಿಧ ಎನ್‍ಜಿಓ ಸದಸ್ಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಮೈಸೂರಿನ ಜನತೆ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮವು ಅಶೋಕರಸ್ತೆಯಲ್ಲಿರುವ ಸೇಂಟ್ ಫಿಲೋಮಿನಾ ಚರ್ಚ್ ಬಳಿ ಬೆಳಿಗ್ಗೆ ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞಾ ವಿಧಿ ಪಡೆದ ನಂತರ ಈ ಮ್ಯಾರಥಾನ್ ಅಶೋಕ ರಸ್ತೆಯಿಂದ ಆರಂಭಗೊಂಡು ಆಜಂ ಮಸೀದಿ ಮುಂಭಾಗ ದಲ್ಲಿ ಸಾಗಿ, ನೆಹರೂ ವೃತ್ತದ ಮೂಲಕ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಅಂತ್ಯಗೊಳ್ಳಲಿದೆ.
ಮುಂದುವರೆದು ಬೆಳಿಗ್ಗೆ 10 ಗಂಟೆಗೆ ವಿದ್ಯಾ ವರ್ಧಕ ಕಾನೂನು ಕಾಲೇಜು ಆವರಣದಲ್ಲಿ ರಕ್ತ ದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ನಂತರ ಸಂಜೆ 4.30ಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ `ಮಾರ್ಚ್‍ಫಾಸ್ಟ್’ ಕಾರ್ಯಕ್ರಮ ದಲ್ಲಿ ರಾಷ್ಟ್ರೀಯ ಏಕತಾ ದಿನದ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕರಿಸಿದ ನಂತರ ಮಹಾವೀರ ವೃತ್ತ(ದೊಡ್ಡ ಗಡಿಯಾರ ವೃತ್ತ)ದ ಮೂಲಕ ಅಶೋಕ ರಸ್ತೆಯಲ್ಲಿ ಸಾಗಿ ನೆಹರು ವೃತ್ತದ ಮೂಲಕ ಸಾಗಿ ಸೇಂಟ್ ಫಿಲೋಮಿನಾ ಚರ್ಚ್ ಬಳಿ ಅಂತ್ಯಗೊಳ್ಳಲಿದೆ.
ಈ ಮಾರ್ಚ್ ಫಾಸ್ಟ್‍ನಲ್ಲಿ ಮೈಸೂರು ನಗರದ ಎಲ್ಲಾ ವಿಭಾಗದ ಪೊಲೀಸ್ ತುಕಡಿಗಳು, ಪೊಲೀಸ್ ಬ್ಯಾಂಡ್ ಮತ್ತು ಅಶ್ವಾರೋಹಿ ದಳದ ತುಕಡಿಗಳು ಭಾಗವಹಿಸಲಿವೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಿಸಿಆರ್‍ಬಿ ವಿಭಾಗದ ಇನ್ಸ್‍ಪೆಕ್ಟರ್ ಮಲ್ಲೇಶ್ ಅವರ(ದೂ.ಸಂಖ್ಯೆ: 9880367013, 9480802253)ನ್ನು ಸಂಪರ್ಕಿಸಬಹುದು.