ಸುಮಾರು 1 ಕೋಟಿ ರೂ. ಮೌಲ್ಯದ ಪೇಪರ್ ವಸ್ತು ನಾಶ 12 ಅಗ್ನಿಶಾಮಕ ದಳದ ವಾಹನ, 50 ಮಂದಿಯಿಂದ ಸತತ 8 ತಾಸು ಕಾರ್ಯಾಚರಣೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಘಟನೆಗೆ ಕಾರಣ ಮೈಸೂರು: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಉಂಟಾದ ಭಾರೀ ಬೆಂಕಿಗೆ ಅಗರಬತ್ತಿ ಪ್ಯಾಕೇಜಿಂಗ್ ಗೋದಾಮಿನ ಸುಮಾರು ಒಂದು ಕೋಟಿ ರೂ. ಮೌಲ್ಯದ ಪೇಪರ್ ವಸ್ತುಗಳು ಭಸ್ಮವಾಗಿರುವ ಘಟನೆ ಮೈಸೂರಿನ ಅಶೋಕಪುರಂ ರೈಲ್ವೆ ಸ್ಟೇಷನ್ ಬಳಿ ಇಂದು ಮುಂಜಾನೆ ಸಂಭವಿಸಿದೆ. ಹಳೇ ಮಾನಂದವಾಡಿ ರಸ್ತೆಯ ಎನ್‍ಆರ್ ಗ್ರೂಪ್‍ಗೆ…