ಮೈಸೂರು: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಶ್ರವಣದೋಷವುಳ್ಳ ಹಾಗೂ ಅಂಧ ಮಕ್ಕಳಿಗೆ ಬೋಧಿಸಲು ಅಗತ್ಯವಾದ ವಿಶೇಷ ಶಿಕ್ಷಕರ ತರಬೇತಿ ಕಾರ್ಯಕ್ರಮಗಳನ್ನು ಮೈಸೂರಿನ ತಿಲಕ್‍ನಗರದಲ್ಲಿ ನಡೆಸಲಾಗುತ್ತಿದೆ. ಈ ವಿಶೇಷ ಆ.ಇಜ ಕಾರ್ಯಕ್ರಮಗಳು ಸಾಮಾನ್ಯ ಆ.ಇಜಗೆ ಸಮಾನಾಂತರವಾಗಿವೆ ಎಂದು ಮೈಸೂರಿನ ಅಂಧ ಹಾಗೂ ಶ್ರ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದ ಉಪ ನಿರ್ದೇಶಕರು ತಿಳಿಸಿದ್ದಾರೆ. 2 ವರ್ಷಗಳ ಅವಧಿಯ ಈ ತರಬೇತಿಗೆ ಸೇರಲು ಇಚ್ಛಿಸುವ ಅಭ್ಯರ್ಥಿಗಳು ಶೇ.50ರಷ್ಟು (ಎಸ್‍ಸಿ, ಎಸ್‍ಟಿ ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಶೇ.45)…