ಅಂಧ, ಶ್ರವಣದೋಷವುಳ್ಳ ಮಕ್ಕಳ ವಿಶೇಷ ಶಿಕ್ಷಕರ ತರಬೇತಿ
ಮೈಸೂರು

ಅಂಧ, ಶ್ರವಣದೋಷವುಳ್ಳ ಮಕ್ಕಳ ವಿಶೇಷ ಶಿಕ್ಷಕರ ತರಬೇತಿ

June 1, 2018

ಮೈಸೂರು: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಶ್ರವಣದೋಷವುಳ್ಳ ಹಾಗೂ ಅಂಧ ಮಕ್ಕಳಿಗೆ ಬೋಧಿಸಲು ಅಗತ್ಯವಾದ ವಿಶೇಷ ಶಿಕ್ಷಕರ ತರಬೇತಿ ಕಾರ್ಯಕ್ರಮಗಳನ್ನು ಮೈಸೂರಿನ ತಿಲಕ್‍ನಗರದಲ್ಲಿ ನಡೆಸಲಾಗುತ್ತಿದೆ. ಈ ವಿಶೇಷ ಆ.ಇಜ ಕಾರ್ಯಕ್ರಮಗಳು ಸಾಮಾನ್ಯ ಆ.ಇಜಗೆ ಸಮಾನಾಂತರವಾಗಿವೆ ಎಂದು ಮೈಸೂರಿನ ಅಂಧ ಹಾಗೂ ಶ್ರ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದ ಉಪ ನಿರ್ದೇಶಕರು ತಿಳಿಸಿದ್ದಾರೆ.
2 ವರ್ಷಗಳ ಅವಧಿಯ ಈ ತರಬೇತಿಗೆ ಸೇರಲು ಇಚ್ಛಿಸುವ ಅಭ್ಯರ್ಥಿಗಳು ಶೇ.50ರಷ್ಟು (ಎಸ್‍ಸಿ, ಎಸ್‍ಟಿ ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಶೇ.45) ಅಂಕಗಳೊಂದಿಗೆ 10+2/ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಎಸ್‍ಸಿ, ಎಸ್‍ಟಿ ಮತ್ತು ವಿಕಲಚೇತನ ವ್ಯಕ್ತಿಗಳಿಗೆ ಯಾವುದೇ ಬೋಧನಾ ಶುಲ್ಕ ಇರುವುದಿಲ್ಲ.

D.Ed.Spl.Ed.(VI): D.Ed Special Education – Visual Impairment (ಅಂಧ ಮಕ್ಕಳಿಗೆ ಶಿಕ್ಷಕರಾಗಲು) D.Ed.Spl.Edu.(HI): D.Ed Special Education- Hearing Impairment (ಶ್ರವಣದೋಷವುಳ್ಳ ಮಕ್ಕಳಿಗೆ ಶಿಕ್ಷಕರಾಗಲು).
ತರಬೇತಿ ನಂತರ ಪ್ರಶಿಕ್ಷಣಾರ್ಥಿಗಳು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರ ಇಲಾಖೆಯ ಅನುದಾನದಿಂದ ನಡೆಯುತ್ತಿರುವ ಸರ್ಕಾರಿ, ಸರ್ಕಾರೇತರ ಶಾಲೆಗಳಲ್ಲಿ ವಿಶೇಷ ಶಿಕ್ಷಕರಾಗಿ, ಸಾಮಾನ್ಯ ಶಾಲೆಗಳಲ್ಲಿ ಶಿಕ್ಷಕರಾಗಿ, ಸಂಪನ್ಮೂಲ ಶಿಕ್ಷಕರಾಗಿ, ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅಥವಾ ಸರ್ವ ಶಿಕ್ಷಣ ಅಭಿಯಾನದಲ್ಲಿ ಸಂಪನ್ಮೂಲ ಶಿಕ್ಷಕರಾಗಿ ಕಾರ್ಯನಿರ್ವಹಿಸಬಹುದು ಎಂದು ತಿಳಿಸಿದ್ದಾರೆ.

ಈ ತರಬೇತಿಗೆ ಸಂಬಂಧಿಸಿದ ವಿವರವಾದ ಮಾಹಿತಿ www.mysore.nic.in ನಲ್ಲಿ ಲಭ್ಯವಿದೆ. ಅರ್ಜಿ ನಮೂನೆ https://applyadmission.net/aioat2018/ ಇಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರು(ತರಬೇತಿ)ರವರ ಕಛೇರಿ, ಸರ್ಕಾರಿ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ, ಪುಲಿಕೇಶಿ ರಸ್ತೆ, ತಿಲಕ್‍ನಗರ, ಮೈಸೂರು-570001. ದೂ.0821-2491600.

Translate »