ಚಾ.ನಗರ ತಾಪಂ ಅಧ್ಯಕ್ಷರ ಆಯ್ಕೆ ಮುಂದೂಡಿಕೆ
ಚಾಮರಾಜನಗರ

ಚಾ.ನಗರ ತಾಪಂ ಅಧ್ಯಕ್ಷರ ಆಯ್ಕೆ ಮುಂದೂಡಿಕೆ

June 1, 2018

ಚಾಮರಾಜನಗರ: ಇಂದಿಲ್ಲಿ ನಿಗದಿ ಆಗಿದ್ದ ಚಾಮರಾಜ ನಗರ ತಾಲೂಕು ಪಂಚಾಯಿತಿ ಅಧ್ಯಕ್ಷರ ಆಯ್ಕೆ ಚುನಾವಣೆ ಸದಸ್ಯರ ಕೋರಂ ಅಭಾವದ ಕಾರಣ ಮುಂದೂಡಲ್ಪಟ್ಟಿತು.

ಚಾಮರಾಜನಗರ ತಾಲೂಕು ಪಂಚಾ ಯಿತಿ ಅಧ್ಯಕ್ಷರಾಗಿದ್ದ ಹೆಚ್.ವಿ.ಚಂದ್ರು ಅವರ ರಾಜೀನಾಮೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕೆ ಇಂದು ಚುನಾ ವಣೆ ನಿಗದಿ ಆಗಿತ್ತು. ಯಾನಗಹಳ್ಳಿ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ದೊಡ್ಡಮ್ಮ ಉಮೇ ದುವಾರಿಕೆ ಸಲ್ಲಿಸಿದರು. ಚುನಾವಣೆ ನಡೆ ಯುವ ಸಭೆಗೆ ಬಿಜೆಪಿಯ 17 ಸದಸ್ಯರು ಸೇರಿ ಒಟ್ಟು 18 ಸದಸ್ಯರು ಗೈರು ಹಾಜರಾ ದರು. ಹೀಗಾಗಿ ಕೋರಂ ಅಭಾವದ ಕಾರಣ ಕ್ಕಾಗಿ ಚುನಾವಣೆಯನ್ನು ಜೂನ್ 8ಕ್ಕೆ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವ ಹಿಸಿದ ಉಪವಿಭಾಗಾಧಿಕಾರಿ ಫೌಜಿಯಾ ತರನುಂ ಮುಂದೂಡಿದರು.

ನಡೆದಿದ್ದೇನು: ಚಾಮರಾಜನಗರ ತಾಪಂ ಒಟ್ಟು 29 ಸದಸ್ಯರ ಬಲ ಹೊಂದಿದೆ. ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 11, ವಾಟಾಳ್ ಪಕ್ಷ 1 ಸ್ಥಾನ ಗಳಿಸಿತ್ತು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ನಿಗದಿ ಆಗಿತ್ತು. ಈ ವರ್ಗಕ್ಕೆ ಸೇರಿದ ಸದಸ್ಯರು ಬಹುಮತ ಗಳಿಸಿದ ಬಿಜೆಪಿಯಲ್ಲಿ ಇಲ್ಲ. ಹೀಗಾಗಿ ಕಾಂಗ್ರೆಸ್ ಸದಸ್ಯ ಹೆಚ್.ವಿ. ಚಂದ್ರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಪಕ್ಷದಲ್ಲಿ ಆದ ತೀರ್ಮಾನದಂತೆ ಹೆಚ್.ವಿ. ಚಂದ್ರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ತಾಪಂ ಸಭಾಂ ಗಣದಲ್ಲಿ ಚುನಾವಣೆ ನಿಗದಿ ಆಗಿತ್ತು.

ಬೆ.10ರಿಂದ 12 ಗಂಟೆವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ವೇಳೆ ಯಲ್ಲಿ ಯಾನಗಹಳ್ಳಿ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ದೊಡ್ಡಮ್ಮ ನಾಮಪತ್ರ ಸಲ್ಲಿಸಿದರು. ಮ.1 ಗಂಟೆಗೆ ಚುನಾವಣೆ ನಿಗದಿ ಆಗಿತ್ತು. ಈ ವೇಳೆಗೆ ಕಾಂಗ್ರೆಸ್‍ನ 10 ಸದಸ್ಯರು ಹಾಗೂ ವಾಟಾಳ್ ಪಕ್ಷದ ಸದಸ್ಯೆ ಸವಿತಾ (ಒಟ್ಟು 11) ಆಗಮಿಸಿ ದರು. ಕಾಂಗ್ರೆಸ್ ಸದಸ್ಯ ಕುಮಾರನಾಯ್ಕ ಸೇರಿ ದಂತೆ ಬಿಜೆಪಿಯ ಎಲ್ಲಾ 17 ಸದಸ್ಯರು ಗೈರು ಹಾಜರಾದರು. ನಿಯಮಾವಳಿ ಪ್ರಕಾರ ಅರ್ಧ ಗಂಟೆಗಳ ಕಾಲ ಕಾದ ಚುನಾವಣಾಧಿಕಾರಿ ಫೌಜಿಯಾ ತರನುಂ ಅವರು ಈ ಸಭೆಗೆ ಶೇ.50 ರಷ್ಟು ಸದಸ್ಯರು ಹಾಜರಾಗಿದ್ದಾಗ ಮಾತ್ರ ಸಭೆ ನಡೆಸ ಬಹುದು. ಇಷ್ಟು ಸದಸ್ಯರು ಹಾಜರಿ ಲ್ಲದ ಕಾರಣ ಕೋರಂ ಅಭಾವದಿಂದ ಚುನಾ ವಣೆಯನ್ನು ಜೂನ್ 8ಕ್ಕೆ ಮುಂದೂಡಿರುವು ದಾಗಿ ಪ್ರಕಟಿಸಿ ಸಭೆಯನ್ನು ಮುಕ್ತಾ ಯಗೊಳಿಸಿದರು.

ಮುಂದೇನು: ಜೂನ್ 8ರಂದು ನಡೆ ಯುವ ಚುನಾವಣಾ ಸಭೆಗೂ ಸಹ ಕೋರಂ ಅಭಾವ ಉಂಟಾದರೆ ಮತ್ತೊಮ್ಮೆ ಚುನಾವಣೆಯನ್ನು ಮುಂದೂ ಡಲಾಗುವುದು. ಆದರೆ 3ನೇ ಚುನಾವಣಾ ವೇಳೆಗೂ ಸಹ ಕೋರಂ ಅಭಾವ ಉಂಟಾದರೆ ಈಗಾಗಲೇ ನಾಮಪತ್ರ ಸಲ್ಲಿಸಿ ರುವುದನ್ನು ಅಧ್ಯಕ್ಷರಾಗಿ ಆಯ್ಕೆಯಾಗಿ ದ್ದಾರೆ ಎಂದು ಪ್ರಕಟಿಸಲು ನಿಯಮಾವಳಿ ಪ್ರಕಾರ ಅವಕಾಶ ಚುನಾವಣಾಧಿಕಾರಿಗಳಿಗೆ ಇದೆ.

Translate »