ಬೇಗೂರಿನಲ್ಲಿ ಶಾಸಕ ನಿರಂಜನ್‍ಗೆ ಸನ್ಮಾನ
ಚಾಮರಾಜನಗರ

ಬೇಗೂರಿನಲ್ಲಿ ಶಾಸಕ ನಿರಂಜನ್‍ಗೆ ಸನ್ಮಾನ

June 1, 2018

ಬೇಗೂರು:  ಶಾಸಕರಾಗಿ ಆಯ್ಕೆಯಾದ ನಂತರ ಆಗಮಿಸಿದ ಸಿ.ಎಸ್. ನಿರಂಜನ್‍ಕುಮಾರ್‍ರವರನ್ನು ಬಿಜೆಪಿ ಕಾರ್ಯಕರ್ತರು ಇಂದಿಲ್ಲಿ ಶಾಲು ಹೊದಿಸಿ ಸನ್ಮಾನಿಸಿಬರಮಾಡಿಕೊಂಡರು.

ಮೊದಲು ರಾಷ್ಟ್ರೀಯ ಹೆದ್ದಾರಿ 766 ಹಿರೀಕಾಟಿಗೇಟ್‍ನ ಬಳಿ ಶಾಲು ಹೊದಿಸಿ ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು. ನಂತರ ಬೇಗೂರು ಬಸ್ ನಿಲ್ದಾಣದ ಬಳಿ ಸಮಾವೇಶಗೊಂಡ ಬಿಜೆಪಿ ಕಾರ್ಯ ಕರ್ತರು ನೂತನ ಶಾಸಕರನ್ನು ಹಾರಹಾಕಿ ಬರಮಾಡಿಕೊಂಡರು ಹಾಗೂ ಗ್ರಾಮದ ಶ್ರೀರಾಮ ಮಂದಿರದವರೆಗೆ ಮೆರವಣ ಗೆಯಲ್ಲಿ ತೆರಳಿ ನಂತರ ಗುಂಡ್ಲುಪೇಟೆಗೆ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನಸ್ವಾಮಿಹಿರೇಮಠ್, ಕಮರ ಹಳ್ಳಿರವಿ, ಹೊರೆಯಾಲಕೃಷ್ಣ, ದೊಡ್ಡಹುಂಡಿ ಜಗದೀಶ್, ತಾಪಂ ಸದಸ್ಯೆ ತಾಯಮ್ಮ, ಗುರುಕಾರ್‍ಮಹೇಶ್, ಸೋಮು, ಬೆಳಚಲ ವಾಡಿ ರಾಜಶೇಖರಪ್ಪ, ಸಂದೀಪ್, ಗ್ರಾಪಂ ಸದಸ್ಯರಾದ ಮಹದೇವು, ಸತೀಶ್ ಮಹ ದೇವಗೌಡ, ಮಹದೇವಸ್ವಾಮಿ, ಹೊರೆಯಾಲ ಮಹೇಶ್, ಜಯರಾಮು, ಸೋಮು, ರವಿ, ಬೆಟ್ಟದಪುರಮಹೇಶ್, ಸದಾನಂದ, ಸಂದೀಪ್, ಶಿವು, ದೀಪು, ಲೋಕಿ, ಚಂದ್ರು ಸೇರಿದಂತೆ ಬಿಜೆಪಿ ಕಾರ್ಯ ಕರ್ತರು ಮತ್ತಿತರರು ಹಾಜರಿದ್ದರು.

Translate »