ಮೈಸೂರು: ಮೈಸೂರು ದಸರಾ ಅಂಗವಾಗಿ ಅ.14ರಂದು ಭಾನುವಾರ ಬೆಳಿಗ್ಗೆ 6 ಗಂಟೆಗೆ ಮೈಸೂರಿನಲ್ಲಿ ದಸರಾ ಮ್ಯಾರಥಾನ್ ಆಯೋಜಿಸಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಮೈದಾನದಿಂದ ಮ್ಯಾರಥಾನ್ ಆರಂಭವಾಗಲಿದೆ. ಪುರುಷರು ಮತ್ತು ಮಹಿಳೆಯರಿಗಾಗಿ 10 ಕಿ.ಮೀ., ಕಾಲೇಜು ಬಾಲಕ, ಬಾಲಕಿಯರಿಗಾಗಿ 6 ಕಿ.ಮೀ., ಪ್ರೌಢಶಾಲಾ ಬಾಲಕ, ಬಾಲಕಿಯರಿಗಾಗಿ 5 ಕಿ.ಮೀ., ಹಿರಿಯ ಪ್ರಾಥಮಿಕ ಬಾಲಕ, ಬಾಲಕಿಯರಿಗಾಗಿ 3 ಕಿ.ಮೀ. ಮತ್ತು ಹಿರಿಯ ನಾಗರಿಕರಿಗೆ 2 ಕಿ.ಮೀ., ಮ್ಯಾರಥಾನ್ ನಡೆಯಲಿದೆ. ವಿಜೇತ ಕ್ರೀಡಾಪಟುಗಳಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಪಾರತೋಷಕ…