ನಾಳೆ ದಸರಾ ಮ್ಯಾರಥಾನ್
ಮೈಸೂರು

ನಾಳೆ ದಸರಾ ಮ್ಯಾರಥಾನ್

October 13, 2018

ಮೈಸೂರು: ಮೈಸೂರು ದಸರಾ ಅಂಗವಾಗಿ ಅ.14ರಂದು ಭಾನುವಾರ ಬೆಳಿಗ್ಗೆ 6 ಗಂಟೆಗೆ ಮೈಸೂರಿನಲ್ಲಿ ದಸರಾ ಮ್ಯಾರಥಾನ್ ಆಯೋಜಿಸಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಮೈದಾನದಿಂದ ಮ್ಯಾರಥಾನ್ ಆರಂಭವಾಗಲಿದೆ. ಪುರುಷರು ಮತ್ತು ಮಹಿಳೆಯರಿಗಾಗಿ 10 ಕಿ.ಮೀ., ಕಾಲೇಜು ಬಾಲಕ, ಬಾಲಕಿಯರಿಗಾಗಿ 6 ಕಿ.ಮೀ., ಪ್ರೌಢಶಾಲಾ ಬಾಲಕ, ಬಾಲಕಿಯರಿಗಾಗಿ 5 ಕಿ.ಮೀ., ಹಿರಿಯ ಪ್ರಾಥಮಿಕ ಬಾಲಕ, ಬಾಲಕಿಯರಿಗಾಗಿ 3 ಕಿ.ಮೀ. ಮತ್ತು ಹಿರಿಯ ನಾಗರಿಕರಿಗೆ 2 ಕಿ.ಮೀ., ಮ್ಯಾರಥಾನ್ ನಡೆಯಲಿದೆ. ವಿಜೇತ ಕ್ರೀಡಾಪಟುಗಳಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಪಾರತೋಷಕ ವಿತರಿಸಲಾಗುವುದು. ಮೈಸೂರಿನ ನಂಜರಾಜ ಬಹದ್ದೂರ್ ಛತ್ರ, ಚಾಮುಂಡಿ ವಿಹಾರ ಕ್ರೀಡಾಂಗಣ, ನಂದಿನಿ ಡೈರಿ ಎದುರಿನ ಲಯನ್ಸ್ ಹಾಲ್‍ನಲ್ಲಿ ಈಗಾಗಲೇ ನೋಂದಾವಣಿ ನಡೆಯುತ್ತಿದ್ದು, ಆಸಕ್ತರು ಅ.13ರ ಸಂಜೆ 5 ಗಂಟೆವರೆಗೂ ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ ಪ್ರಕಾಶ್- 9448306311, ಶ್ರೀಕಾಂತ್- 97318 08008, ಭಾಸ್ಕರ್- 9901234057, ರಾಘವೇಂದ್ರ- 9164997757 ಸಂಪರ್ಕಿಸಬಹುದು.

Translate »