ಹಳೇಬೀಡು, ಹನಿಕೆ, ಹಗರೆಯಲ್ಲಿ ಉಪಮಾರುಕಟ್ಟೆ ನಿರ್ಮಾಣ ಭರವಸೆ
ಹಾಸನ

ಹಳೇಬೀಡು, ಹನಿಕೆ, ಹಗರೆಯಲ್ಲಿ ಉಪಮಾರುಕಟ್ಟೆ ನಿರ್ಮಾಣ ಭರವಸೆ

October 13, 2018

ಬೇಲೂರು: ತಾಲೂಕಿನ ಹಳೇ ಬೀಡು, ಹನಿಕೆ, ಹಗರೆ ಸೇರಿದಂತೆ ವಿವಿಧ ಭಾಗದಲ್ಲಿ ರೈತರು ಬೆಳೆದ ಬೆಳೆಗಳ ಮಾರಾಟಕ್ಕೆ ಅನುಕೂಲವಾಗುವಂತೆ ಉಪ ಕೃಷಿ ಮಾರುಕಟ್ಟೆ ನಿರ್ಮಾಣ ಹಾಗೂ ವಾರದ ಸಂತೆಯ ಸ್ಥಳದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ಇಲ್ಲಿನ ಕೃಷಿ ಮಾರುಕಟ್ಟೆ ಆವರಣದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಇಲ್ಲಿನ ಎಪಿಎಂಸಿ ಆವರಣದಲ್ಲಿ 3.5 ಕೋಟಿ ಅನುದಾನದಲ್ಲಿ ಮಾರುಕಟ್ಟೆ ನಿರ್ಮಿಸಲಾ ಗುತ್ತಿದೆ. ಹನಿಕೆ ಉಪ ಮಾರುಕಟ್ಟೆ ಪ್ರಾಂಗಣ ದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮಾರುಕಟ್ಟೆಗೆ ಕಾಂಪೌಂಡ್ ನಿರ್ಮಾಣ, ಹಳೇಬೀಡು ಸಂತೆ ಮೈದಾನದಲ್ಲಿ 2 ಮುಚ್ಚಿದ ಮಾರು ಕಟ್ಟೆ ನಿರ್ಮಾಣ, ಹಗರೆ ಸಂತೆ ಮೈದಾನ ದಲ್ಲಿ 4 ಮುಚ್ಚಿದ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ. ಹಳೇಬೀಡು, ಹನಿಕೆ ಹಾಗೂ ಹಗರೆಯಲ್ಲಿ ಉಪ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಹನಿಕೆ ಸಂತೆಯಲ್ಲಿ ಜಾನುವಾರು ಮಾರಾಟಕ್ಕೆ ಅನುಗುಣವಾಗಿ ವಿವಿಧ ಸೌಲಭ್ಯ ಕಲ್ಪಿಸಿ ಹಿಂದಿನಂತೆ ಜಾನುವಾರು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು. ಹಳೇಬೀಡಿನ ಸಂತೆ ನಡೆಯುವ ಸ್ಥಳದಲ್ಲಿ ಅತ್ಯಾ ಧುನಿಕವಾದ ಹೈಟೆಕ್ ಉಪ ಮಾರುಕಟ್ಟೆ ನಿರ್ಮಿಸಲು ಉದ್ದೇಶಿಸಲಾಗಿದೆ. ಗ್ರಾಪಂ ನವರು ಸ್ಥಳವನ್ನು ಬಿಟ್ಟುಕೊಟ್ಟ ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು. ಇದಕ್ಕಾಗಿ 5 ಕೋಟ ರೂ. ವೆಚ್ಚ ಮಾಡ ಲಾಗುವುದು ಎಂದರು.

ಹಗರೆಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಉಪಕೇಂದ್ರ ಆರಂಭಿಸುವ ಯೋಜನೆಯಿದೆ. ತಾಲೂಕಿನ ಗೆಂಡೇಹಳ್ಳಿ, ಹುನುಗನಹಳ್ಳಿ, ಅರೇಹಳ್ಳಿ, ನಾರ್ವೆ ಇಲ್ಲಿನ ಗ್ರಾಮೀಣ ಸಂತೆ ನಡೆಯುವ ಸ್ಥಳದ ಹೆಚ್ಚುವರಿ ಅಭಿವೃದ್ಧಿಗೆ ತಲಾ 50 ಲಕ್ಷ ರೂ.ನಂತೆ 2 ಕೋಟಿ ರೂ. ಅಗತ್ಯವಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗಿದೆ ಎಂದು ಶಾಸಕರು ತಿಳಿಸಿದರು.

ಮಾರುಕಟ್ಟೆಗೆ ಬರುವ ರೈತರಿಗೆ ದಲ್ಲಾಳಿ ಗಳು, ಮಧ್ಯವರ್ತಿಗಳಿಂದ ಮೋಸ ಆಗ ದಂತೆ ಎಚ್ಚರಿಕೆ ವಹಿಸಬೇಕು. ಜೋಳಕ್ಕೆ ಬೆಂಬಲ ಬೆಲೆ ನಿಗದಿಗೆ ಸರ್ಕಾರ ಚಿಂತನೆ ನಡೆಸಿದೆ. ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಸ್ಥಳದ ಕೊರತೆಯಿದ್ದು, ಟಿಎಪಿಸಿಎಂಎಸ್‍ಗೆ ಸೇರಿದ 3.5 ಎಕರೆ ಭೂಮಿಯಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲಾಗು ವುದು. ಈ ಸ್ಥಳ ನೀಡುವಂತೆ ಸಂಬಂಧ ಪಟ್ಟವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ತಾಲೂಕಿನಲ್ಲಿ 8 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, 5 ಕುಟುಂಬ ಗಳಿಗೆ ತಲಾ ಲಕ್ಷರೂ. ನಂತೆ ಪರಿಹಾರ ನೀಡಲಾಗಿದೆ. ಉಳಿದವರಿಗೆ ಶೀಘ್ರವೇ ಪರಿ ಹಾರ ವಿತರಿಸಲಾಗುವುದು. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಮುಂದಾಗ ಬಾರದು ಮನವಿ ಮಾಡಿದರು.

ಎಪಿಎಂಸಿ ಅಧ್ಯಕ್ಷ ವಿಷ್ಣುಕುಮಾರ್ ಮಾತ ನಾಡಿ, ಈಗಾಗಲೇ ಹರಾಜು ಕಟ್ಟೆ ನಿರ್ಮಿಸ ಲಾಗಿದೆ. ಇದನ್ನು ರೈತರು ಉಪಯೋಗಿಸಿ ಕೊಳ್ಳಬೇಕು. ರೈತರು ತಾವು ತರುವಂತಹ ಕೃಷಿ ಬೆಳೆಗಳಿಗೆ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ಆ ರೀತಿ ಕಂಡುಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ನಮ್ಮಲ್ಲಿ 155 ವರ್ತಕರು ಲೈಸನ್ಸ್ ಪಡೆದಿ ದ್ದಾರೆ. ಗ್ರಾಮೀಣ ಭಾಗದಲ್ಲಿ ತೂಕದಲ್ಲಿ ಮೋಸ, ಮಧ್ಯವರ್ತಿಗಳ ಹಾವಳಿ ಕಂಡು ಬಂದರೆ ಅಂತಹ ವರ್ತಕರ ಲೈಸನ್ಸ್ ರದ್ದುಪಡಿಸಲಾಗುವುದು. ಸದ್ಯ ಎಪಿಎಂಸಿ ಯಲ್ಲಿ 1.5 ಕೋಟಿ ರೂ. ವಹಿವಾಟು ನಡೆದಿದ್ದು, ಬರದಿಂದಾಗಿ ಹೆಚ್ಚಿನ ವಹಿವಾಟು ನಡೆಯಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.
ನಿಯೋಜಿತ ಅಧ್ಯಕ್ಷ ಅದ್ಧೂರಿ ಕುಮಾರ್, ಉಪಾಧ್ಯಕ್ಷ ನರಸಿಂಹೇಗೌಡ, ಜಿಪಂ ಸದಸ್ಯೆ ಲತಾಮಂಜೇಶ್ವರಿ, ಎಪಿಎಂಸಿ ಸದಸ್ಯರಾದ ಮಂಜೇಗೌಡ, ಜಗದೀಶ್, ಸುಧಾ, ಕೃಷ್ಣೇಗೌಡ, ತಾಪಂ ಸದಸ್ಯರಾದ ಸಂಗೀತಾ, ರಂಗೇಗೌಡ, ಪ್ರಮುಖರಾದ ದಿಲೀಪ್, ದೇವುಪ್ರಸಾದ್ ಇತರರಿದ್ದರು.

Translate »