ಬೆಂಗಳೂರು,ಸೆ.16-ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಜೆಪಿ ಭವನದಲ್ಲಿ ಇಂದು ಸಂಜೆ ನಡೆದ ಕೊಡಗು ಜಿಲ್ಲೆ ಜೆಡಿಎಸ್ ಮುಖಂಡರ ಸಭೆಯಲ್ಲಿ ತೀವ್ರ ಗದ್ದಲ ಉಂಟಾಗಿ ಸಭೆಯನ್ನು ರದ್ದುಪಡಿಸಿದ ಘಟನೆ ನಡೆದಿದೆ. ಮಾಜಿ ಸಚಿವ ಜೀವಿಜಯ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಗಣೇಶ್ ಗುಂಪುಗಳ ನಡುವೆ ದೇವೇಗೌಡರ ಸಮ್ಮುಖ ದಲ್ಲೇ ಮಾತಿನ ಚಕಮಕಿ ತಾರಕಕ್ಕೇರಿದ್ದು ಸಭೆ ಮುಂದುವರೆಸುವ ಲಕ್ಷಣಗಳೇ ಕಾಣದಿದ್ದಾಗ, ಅನ್ಯಮಾರ್ಗವಿಲ್ಲದೇ ದೇವೇಗೌಡರು ಸಭೆಯನ್ನು ರದ್ದುಪಡಿಸಿದರು. ಸಭೆಯ ಆರಂಭದಲ್ಲೇ ಮಾತಿನ ಚಕಮಕಿ ಶುರುವಾಯಿತು. ವೇದಿಕೆಯಲ್ಲಿದ್ದ ದೇವೇಗೌಡರು ಕೊಡಗು…