ಮೈಸೂರು: ಪಡು ವಾರಹಳ್ಳಿಯ ದೇವು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೊರೇಟರ್ ಸಿ. ಮಾದೇಶ್, ಸಹೋದರ ಸಿ.ಮಂಜು, ಚಂದ್ರು ಅಲಿಯಾಸ್ ಚಂದು, ನಾಗ ಅಲಿಯಾಸ್ ಕಾಳ ಸೇರಿದಂತೆ ಎಲ್ಲಾ 29 ಮಂದಿ ಆರೋಪಿಗಳನ್ನು ವಿಚಾರಣೆಗಾಗಿ ಇಂದು ಮಧ್ಯಾಹ್ನ ಮೈಸೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮೈಸೂರು ಕೇಂದ್ರ ಕಾರಾಗೃಹ, ನಂಜನಗೂಡು, ರಾಮನಗರ, ಬೆಂಗಳೂರು, ಬೆಳಗಾಂ ಜೈಲಿನಲ್ಲಿರುವ ಆರೋಪಿಗಳನ್ನು ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕರೆ ತಂದ ನರಸಿಂಹರಾಜ ಉಪ ವಿಭಾಗದ ಎಸಿಪಿ ಸಿ. ಗೋಪಾಲ್, ಹೆಬ್ಬಾಳು ಠಾಣೆ ಇನ್ಸ್‍ಪೆಕ್ಟರ್…