ಪಡುವಾರಹಳ್ಳಿ ದೇವು ಹತ್ಯೆ ಪ್ರಕರಣ : ಅವ್ವ ಮಾದೇಶ್, ಮಂಜು ಸೇರಿ 29 ಮಂದಿ ಆರೋಪಿಗಳು ಮೈಸೂರು ಕೋರ್ಟ್‍ಗೆ ಹಾಜರು
ಮೈಸೂರು

ಪಡುವಾರಹಳ್ಳಿ ದೇವು ಹತ್ಯೆ ಪ್ರಕರಣ : ಅವ್ವ ಮಾದೇಶ್, ಮಂಜು ಸೇರಿ 29 ಮಂದಿ ಆರೋಪಿಗಳು ಮೈಸೂರು ಕೋರ್ಟ್‍ಗೆ ಹಾಜರು

July 14, 2018

ಮೈಸೂರು: ಪಡು ವಾರಹಳ್ಳಿಯ ದೇವು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೊರೇಟರ್ ಸಿ. ಮಾದೇಶ್, ಸಹೋದರ ಸಿ.ಮಂಜು, ಚಂದ್ರು ಅಲಿಯಾಸ್ ಚಂದು, ನಾಗ ಅಲಿಯಾಸ್ ಕಾಳ ಸೇರಿದಂತೆ ಎಲ್ಲಾ 29 ಮಂದಿ ಆರೋಪಿಗಳನ್ನು ವಿಚಾರಣೆಗಾಗಿ ಇಂದು ಮಧ್ಯಾಹ್ನ ಮೈಸೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮೈಸೂರು ಕೇಂದ್ರ ಕಾರಾಗೃಹ, ನಂಜನಗೂಡು, ರಾಮನಗರ, ಬೆಂಗಳೂರು, ಬೆಳಗಾಂ ಜೈಲಿನಲ್ಲಿರುವ ಆರೋಪಿಗಳನ್ನು ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕರೆ ತಂದ ನರಸಿಂಹರಾಜ ಉಪ ವಿಭಾಗದ ಎಸಿಪಿ ಸಿ. ಗೋಪಾಲ್, ಹೆಬ್ಬಾಳು ಠಾಣೆ ಇನ್ಸ್‍ಪೆಕ್ಟರ್ ತಿಮ್ಮೇಗೌಡ, ಇಂದು ಮಧ್ಯಾಹ್ನ 12.40 ಗಂಟೆ ವೇಳೆಗೆ ಮೈಸೂ ರಿನ ಪ್ರಧಾನ ಮತ್ತು ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಎಸ್.ಕೃಷ್ಣಪ್ಪ ಒಂಟಿಗೋಡಿ ಅವರ ಮುಂದೆ ಹಾಜರುಪಡಿಸಿದರು.

ದೇವು ಹತ್ಯೆ ಸಂಬಂಧ ಆರೋಪಿಗಳನ್ನು ನ್ಯಾಯಾಧೀಶರು ವಿಚಾರಣೆ ನಡೆಸಿದರ ಲ್ಲದೆ, ಪೊಲೀಸರು ಆರೋಪಿಗಳ ವಿರುದ್ಧ 11,000 ಪುಟಗಳ ದೋಷಾರೋಪಣಾ ಪಟ್ಟಿ ಸಲ್ಲಿಸಿದರು. ಹಾಗೆಯೇ 480 ಮಂದಿ ಸಾಕ್ಷಿದಾರರ ಹೆಸರಿನ ಪಟ್ಟಿಯನ್ನು ಸಹ ಸಲ್ಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾ ಲಯಕ್ಕೆ ಕರೆತರುತ್ತಿದ್ದಂತೆಯೇ ಮಾದೇಶ್ ಮತ್ತು ಮಂಜು ಬೆಂಬಲಿಗರು, ಸಂಬಂಧಿ ಕರು ಹಾಗೂ ಸ್ನೇಹಿತರು ಅಪಾರ ಸಂಖ್ಯೆ ಯಲ್ಲಿ ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿದ್ದರು. ಪೊಲೀಸರು ಆರೋಪಿ ಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿದ ನಂತರ ಸರ್ಪಗಾವಲಿನಲ್ಲಿ ವಾಪಸ್ ಕರೆದೊಯ್ದರು. 2016ರ ಮೇ 5ರಂದು ಬೆಳಿಗ್ಗೆ 7.10 ಗಂಟೆಗೆ ಪಡುವಾರಹಳ್ಳಿಯ ಜೋಡಿ ಮಾರಮ್ಮ ದೇವಸ್ಥಾನದ ಮುಂದೆ ದೇವು (35)ನನ್ನು ಕಾರಿನಲ್ಲಿ ಬಂದು ಹತ್ಯೆಗೈದು ಪರಾರಿಯಾಗಿದ್ದರು.

ಪ್ರಕರಣ ಸಂಬಂಧ ಅಂದಿನ ಜಯಲಕ್ಷ್ಮೀಪುರಂ ಠಾಣೆ ಇನ್ಸ್‍ಪೆಕ್ಟರ್ ತಿಮ್ಮೇಗೌಡ ಹಾಗೂ ಎನ್‍ಆರ್ ಉಪವಿಭಾಗದ ಎಸಿಪಿ ಉಮೇಶ್ ಜಿ.ಶೇಟ್ ಅವರು 29 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ನಂತರ ಆರೋಪಿಗಳ ವಿರುದ್ಧ ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಮ್ ಆಕ್ಟ್ ಕೋಕಾ ಕಾಯ್ದೆಯನ್ವಯ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದರು.

Translate »