Tag: Paduvarahalli

ಪಡುವಾರಹಳ್ಳಿ ಶಾಲೆಗೆ ಮೂಲ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಪಡುವಾರಹಳ್ಳಿ ಶಾಲೆಗೆ ಮೂಲ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

November 4, 2018

ಮೈಸೂರು:- ಮೈಸೂರಿನ ಪಡುವಾರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಪಡುವಾರಹಳ್ಳಿ ಶ್ರೀಗಂಧ ಯುವಕರ ಸಂಘದ ವತಿಯಿಂದ ಶಾಲೆಯ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. ಶಾಲೆಯಲ್ಲಿ 150ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಶಾಲೆಯ ಕಾಂಪೌಂಡ್ ಬಿದ್ದು ಹಾಗೂ ಕುಡಿಯುವ ನೀರಿನ ಸೌಲಭ್ಯಕ್ಕಿದ್ದ ಬೋರ್‍ವೆಲ್ ಕೆಟ್ಟು ವರ್ಷವಾಗಿದ್ದರೂ ಸಂಬಂಧಿಸಿದವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಉಳಿಸಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದರೂ…

ಪಡುವಾರಹಳ್ಳಿ ದೇವು ಹತ್ಯೆ ಪ್ರಕರಣ : ಅವ್ವ ಮಾದೇಶ್, ಮಂಜು ಸೇರಿ 29 ಮಂದಿ ಆರೋಪಿಗಳು ಮೈಸೂರು ಕೋರ್ಟ್‍ಗೆ ಹಾಜರು
ಮೈಸೂರು

ಪಡುವಾರಹಳ್ಳಿ ದೇವು ಹತ್ಯೆ ಪ್ರಕರಣ : ಅವ್ವ ಮಾದೇಶ್, ಮಂಜು ಸೇರಿ 29 ಮಂದಿ ಆರೋಪಿಗಳು ಮೈಸೂರು ಕೋರ್ಟ್‍ಗೆ ಹಾಜರು

July 14, 2018

ಮೈಸೂರು: ಪಡು ವಾರಹಳ್ಳಿಯ ದೇವು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೊರೇಟರ್ ಸಿ. ಮಾದೇಶ್, ಸಹೋದರ ಸಿ.ಮಂಜು, ಚಂದ್ರು ಅಲಿಯಾಸ್ ಚಂದು, ನಾಗ ಅಲಿಯಾಸ್ ಕಾಳ ಸೇರಿದಂತೆ ಎಲ್ಲಾ 29 ಮಂದಿ ಆರೋಪಿಗಳನ್ನು ವಿಚಾರಣೆಗಾಗಿ ಇಂದು ಮಧ್ಯಾಹ್ನ ಮೈಸೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮೈಸೂರು ಕೇಂದ್ರ ಕಾರಾಗೃಹ, ನಂಜನಗೂಡು, ರಾಮನಗರ, ಬೆಂಗಳೂರು, ಬೆಳಗಾಂ ಜೈಲಿನಲ್ಲಿರುವ ಆರೋಪಿಗಳನ್ನು ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕರೆ ತಂದ ನರಸಿಂಹರಾಜ ಉಪ ವಿಭಾಗದ ಎಸಿಪಿ ಸಿ. ಗೋಪಾಲ್, ಹೆಬ್ಬಾಳು ಠಾಣೆ ಇನ್ಸ್‍ಪೆಕ್ಟರ್…

ವಿಷ ಸೇವಿಸಿ ಯುವಕ ಆತ್ಮಹತ್ಯೆ
ಮೈಸೂರು

ವಿಷ ಸೇವಿಸಿ ಯುವಕ ಆತ್ಮಹತ್ಯೆ

July 4, 2018

ಮೈಸೂರು: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನೋರ್ವ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.ಮೈಸೂರಿನ ವಿನಾಯಕನಗರ (ಪಡುವಾರಹಳ್ಳಿ)ದಲ್ಲಿರುವ ಅಜ್ಜಿ ಮನೆಯಲ್ಲಿ ಉಳಿದುಕೊಂಡಿದ್ದ ಹೆಚ್.ಡಿ.ಕೋಟೆ ಮೂಲದ ಸತೀಶ್(23) ಮೃತ ಯುವಕ. ಅಜ್ಜಿ ಮನೆಯಲ್ಲಿ ವಾಸವಿದ್ದ ಸತೀಶ್, ಕೋಳಿ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ವಾರದ ಹಿಂದೆ ಮನೆ ಯಲ್ಲೇ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾನೆ. ಸಾಲ ಮಾಡಿಕೊಂಡಿ ದ್ದ ಸತೀಶ್, ಸರಿಯಾಗಿ ಕೆಲಸಕ್ಕೂ ಹೋಗು ತ್ತಿರಲಿಲ್ಲ. ಇದರಿಂದ…

Translate »