ಯಳಂದೂರು: ದಿವಾನ್ ಪೂರ್ಣಯ್ಯರವರ ಜ್ಞಾಪಕಾರ್ಥ ನಿರ್ಮಿಸಿ ರುವ ಶತಮಾನವನ್ನು ಕಂಡಿರುವ ಇತಿಹಾಸ ಪ್ರಸಿದ್ಧ ಜಹಗೀರ್‍ದಾರ್ ಬಂಗಲೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರವು ಹಳೆಯ ಬಂಗಲೆಯನ್ನು ನವೀಕರಿಸಿದ್ದು, ಕಳಪೆ ಕಾಮ ಗಾರಿಯಿಂದಾಗಿ ಬಂಗಲೆ ಕೆಲ ವರ್ಷಗಳಲ್ಲೇ ಶಿಥಿಲಾವಸ್ಥೆಯನ್ನು ತಲುಪಿದೆ. ಪಟ್ಟಣದ ಹೃದಯಭಾಗದಲ್ಲಿರುವ ಜಹಗೀರ್‍ದಾರ್ ಬಂಗಲೆ ಒಂದು ಭವ್ಯ ಬಂಗಲೆಯಾಗಿದ್ದು, ದಿವಾನ್ ಪೂರ್ಣಯ್ಯ ರವರ ಜ್ಞಾಪಕಾರ್ಥವಾಗಿ 1901ರಲ್ಲಿ ಅಂದಿನ ಮೈಸೂರು ಅರಸರ ದಿವಾನ ರಾಗಿದ್ದ ಹಾಗೂ ಪೂರ್ಣಯ್ಯರವರ ವಂಶಸ್ಥರಾದ ಪಿ.ಎನ್.ಕೃಷ್ಣಮೂರ್ತಿ ಯವರು ನಿರ್ಮಿಸಿದ್ದರು. ಶತಮಾನವನ್ನು ಕಂಡಿರುವ ದಿವಾನ್ ಪೂರ್ಣಯ್ಯ…