ನವೀಕರಣ ವೇಳೆ ಕಳಪೆ ಕಾಮಗಾರಿ ಆರೋಪ
ಚಾಮರಾಜನಗರ

ನವೀಕರಣ ವೇಳೆ ಕಳಪೆ ಕಾಮಗಾರಿ ಆರೋಪ

June 2, 2018

ಯಳಂದೂರು: ದಿವಾನ್ ಪೂರ್ಣಯ್ಯರವರ ಜ್ಞಾಪಕಾರ್ಥ ನಿರ್ಮಿಸಿ ರುವ ಶತಮಾನವನ್ನು ಕಂಡಿರುವ ಇತಿಹಾಸ ಪ್ರಸಿದ್ಧ ಜಹಗೀರ್‍ದಾರ್ ಬಂಗಲೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರವು ಹಳೆಯ ಬಂಗಲೆಯನ್ನು ನವೀಕರಿಸಿದ್ದು, ಕಳಪೆ ಕಾಮ ಗಾರಿಯಿಂದಾಗಿ ಬಂಗಲೆ ಕೆಲ ವರ್ಷಗಳಲ್ಲೇ ಶಿಥಿಲಾವಸ್ಥೆಯನ್ನು ತಲುಪಿದೆ.

ಪಟ್ಟಣದ ಹೃದಯಭಾಗದಲ್ಲಿರುವ ಜಹಗೀರ್‍ದಾರ್ ಬಂಗಲೆ ಒಂದು ಭವ್ಯ ಬಂಗಲೆಯಾಗಿದ್ದು, ದಿವಾನ್ ಪೂರ್ಣಯ್ಯ ರವರ ಜ್ಞಾಪಕಾರ್ಥವಾಗಿ 1901ರಲ್ಲಿ ಅಂದಿನ ಮೈಸೂರು ಅರಸರ ದಿವಾನ ರಾಗಿದ್ದ ಹಾಗೂ ಪೂರ್ಣಯ್ಯರವರ ವಂಶಸ್ಥರಾದ ಪಿ.ಎನ್.ಕೃಷ್ಣಮೂರ್ತಿ ಯವರು ನಿರ್ಮಿಸಿದ್ದರು. ಶತಮಾನವನ್ನು ಕಂಡಿರುವ ದಿವಾನ್ ಪೂರ್ಣಯ್ಯ ಬಂಗಲೆ ವಿಭಿನ್ನ ಶೈಲಿಯದಾಗಿದ್ದು, ಭವ್ಯ ಸಾಂಸ್ಕø ತಿಕ ಸ್ಮಾರಕವಾಗಿದೆ. ಪಟ್ಟಣದ ಕೇಂದ್ರ ಸ್ಥಾನದಲ್ಲಿರುವ ಜಹಗೀರ್‍ದಾರ್ ಬಂಗಲೆ ಆಕರ್ಷಣ ೀಯವಾಗಿದ್ದು, ಇಂತಹ ಬಂಗಲೆ ಪಟ್ಟಣದಲ್ಲಿ ಮತ್ತೊಂದಿಲ್ಲ ಎಂದೇ ಹೇಳಬಹುದು.

ಈ ಹಿಂದೆ ಬಂಗಲೆಯು ತಾಲೂಕು ಕಚೇರಿಯಾಗಿ, ಜೆಎಸ್‍ಎಸ್ ಸಂಸ್ಥೆಯ ಶಾಲೆಯಾಗಿ ಮಾರ್ಪಟ್ಟಿತು. ಆದರೆ 2008 ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಆರ್.ಧ್ರುವನಾರಾ ಯಣ್‍ರವರು ಪಟ್ಟಣದಲ್ಲಿರುವ ಐತಿ ಹಾಸಿಕ ಜಹಗೀರ್‍ದಾರ್ ಬಂಗಲೆಯನ್ನು ನವೀಕರಿಸುವ ಮೂಲಕ ಸಂರಕ್ಷಿಸುವ ನಿಟ್ಟಿನಲ್ಲಿ ಮುಂದಾದರು. ನಂತರ ಆರ್.ಧ್ರುವ ನಾರಾಯಣ ಅವರು ಲೋಕಸಭಾ ಸದಸ್ಯ ರಾಗಿ ಆಯ್ಕೆಯಾದರು. ನಂತರದಲ್ಲಿ ಪ್ರಾಚ್ಯ ವಸ್ತು ಇಲಾಖೆಯ ಸಹಕಾರದೊಂದಿಗೆ ಸಂಸದರು ಬಂಗಲೆಯನ್ನು ನವೀಕರಿಸಿ ದಿವಾನ್ ಪೂರ್ಣಯ್ಯರವರ ಜೀವನ ಚರಿತ್ರೆ, ಆಳ್ವಿಕೆ, ಜಿಲ್ಲೆಯ ಐತಿಹಾಸಿಕ ದೇವಾಲಯಗಳ ಕುರಿತ ಮಾಹಿತಿಗಳು, ಪ್ರವಾಸಿ ಕೇಂದ್ರಗಳು, ಜಿಲ್ಲೆಯ ಪವಾಡ ಪುರುಷರ ಇತಿಹಾಸ ಕುರಿತು ಮಾಹಿತಿ ಒಂದೆಡೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಬಂಗಲೆಯನ್ನು ವಸ್ತು ಸಂಗ್ರಹಾಲ ಯವಾಗಿ ಮಾರ್ಪಡಿಸಲು ಯೋಜನೆ ರೂಪಿಸಿದ್ದರು. ಇದಕ್ಕಾಗಿ 1.90 ಕೋಟಿ ರೂ.ಗಳ ಅನುದಾನವನ್ನು ಪ್ರಾಚ್ಯವಸ್ತು ಇಲಾಖೆ ವತಿಯಿಂದ ಕೊಡಿಸಿ ಬಂಗ ಲೆಯ ನವೀಕರಣಕ್ಕೆ ಮುಂದಾದರು.

2009 ರಲ್ಲಿ ಬಂಗಲೆಯನ್ನು ನವೀಕರಣ ಗೊಳಿಸಲು ಕಾಮಗಾರಿ ಪ್ರಾರಂಭಿಸಲಾಗಿತ್ತು. 4 ವರ್ಷಗಳ ಕಾಲ ನಡೆದ ಕಾಮಗಾ ರಿಯು 2014 ರಲ್ಲಿ ಮುಕ್ತಾಯ ಕಂಡು ಬಂಗಲೆಯನ್ನು ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯವಾಗಿ ರೂಪಿಸಲಾಗಿ ಉದ್ಘಾಟನೆಯನ್ನು ಸಹ ಮಾಡಲಾಯಿತು.

ಆದರೆ ಬಂಗಲೆಯಲ್ಲಿ ಹಳೆಯ ಗಾರೆ ಯನ್ನು ತೆಗೆದು ಹೊಸದಾಗಿ ಗಾರೆಯನ್ನು ಹಾಕಿ ಕಾಮಗಾರಿಯನ್ನು ನಡೆಸಬೇಕಿತ್ತು. ಆದರೆ ಅಧಿಕಾರಿಗಳು ಕಳಪೆ ಕಾಮಗಾರಿಗೆ ಅವಕಾಶ ನೀಡಿ ಮುರಿದಿದ್ದ ಕಿಟಕಿಗಳನ್ನು ಸರಿಪಡಿಸುವ ಮೂಲಕ ಬಣ್ಣವನ್ನು ಬಳಿದು ನವೀಕರಣ ಕಾಮಗಾರಿಯನ್ನು ಮುಗಿಸಿ ದರು. ಇದರ ಜೊತೆಗೆ ಬಂಗಲೆಯ ನೆಲ ವನ್ನು ಕಿತ್ತು ಹೊಸದಾಗಿ ಗಾರೆ ಹಾಕದೆ, ಮ್ಯಾಟ್‍ಗಳನ್ನು ಹಾಸುವ ಮೂಲಕ ಕೈತೊಳೆದುಕೊಂಡರು. ಆದರೆ ಬಂಗಲೆ ಯನ್ನು ನವೀಕರಣಗೊಳಿಸಿದ ಕೇವಲ ನಾಲ್ಕೈದು ವರ್ಷಗಳಿಗೆ ಕಟ್ಟಡದ ಕೆಲ ಭಾಗಗಳಲ್ಲಿ ಕಟ್ಟಡದ ನಿರ್ಮಾಣಕ್ಕೆ ಬಳ ಸಿದ್ದ ಸುಣ್ಣದ ಗಾರೆ ಕಿತ್ತು ಹೋಗಿದ್ದು, ಬಂಗಲೆ ಶಿಥಿಲಾವಸ್ಥೆಯನ್ನು ತಲುಪಿದೆ.

ಅನೈರ್ಮಲ್ಯದಿಂದ ಕೂಡಿದ ಬಂಗಲೆ ಆವರಣ: ಬಂಗಲೆಯನ್ನು ನವೀಕರಿಸಿ ವಸ್ತು ಸಂಗ್ರಹಾಲಯವನ್ನಾಗಿ ಮಾಡಿ ಹಲವು ವರ್ಷಗಳೇ ಕಳೆದಿವೆ. ಆದರೆ ಸೂಕ್ತ ನಿರ್ವ ಹಣೆ ಇಲ್ಲದ ಕಾರಣ ರಾತ್ರಿ ವೇಳೆ ಬಂಗಲೆ ಸುತ್ತಲಿನ ಸ್ಥಳ ಕುಡುಕರ ಅಡ್ಡವಾಗಿದೆ. ಜೊತೆಗೆ ಇಲ್ಲಿ ಸುತ್ತಮುತ್ತ ಯಾವುದೇ ಶೌಚಾಲಯಗಳಿಲ್ಲದ ಕಾರಣ ಜನರು ಬಂಗಲೆ ಪಕ್ಕದಲ್ಲಿಯೇ ಬಂದು ವಿಸರ್ಜನೆ ಮಾಡುತ್ತಿದ್ದಾರೆ. ಇದರ ಜೊತೆಗೆ ಬಂಗಲೆ ಸುತ್ತ ಉದ್ಯಾನವನ ನಿರ್ಮಿಸಲು ಉದ್ದೇ ಶಿಸಿ ಸಸಿಗಳನ್ನು ನೆಡಲಾಗಿತ್ತು. ಅವು ಗಳನ್ನು ಸಹ ಕಿತ್ತುಹಾಕಲಾಗಿದೆ. ಜೊತೆಗೆ ಮಳೆಯ ವೇಳೆ ಬಂಗಲೆ ಸುತ್ತ ಹಳ್ಳಕೊಳ್ಳ ಗಳಿಂದ ಕೆಸರುಮಯವಾಗಿ ಮಾರ್ಪ ಡುತ್ತದೆ. ಅಲ್ಲದೇ ಸುತ್ತ ಬಾಟಲಿಗಳು, ಪ್ಲಾಸ್ಟಿಕ್ ಚೀಲಗಳು ಹಾಗೂ ಮದ್ಯದ ಬಾಟ ಲಿಗಳನ್ನು ಬೀಸಾಡಲಾಗಿದ್ದು, ಅನೈರ್ಮಲ್ಯ ಉಂಟುಮಾಡುತ್ತಿದೆ. ಸ್ವಚ್ಛತೆಯನ್ನು ಕಾಪಾಡ ಬೇಕಾದ ಪಟ್ಟಣ ಪಂಚಾಯಿತಿ ಸಹ ಇತ್ತ ಗಮನಹರಿಸದಿರುವುದು ವಿಪರ್ಯಾಸ ಎಂದಿರುವ ನಾಗರಿಕರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Translate »