ಮನುಷ್ಯನಿಗೆ ಹಾಲು ಪರಿಪೂರ್ಣ ಆಹಾರ
ಚಾಮರಾಜನಗರ

ಮನುಷ್ಯನಿಗೆ ಹಾಲು ಪರಿಪೂರ್ಣ ಆಹಾರ

June 2, 2018

ಕಾಮಗೆರೆ: ಮಾನವನ ಆಹಾರ ಪದ್ಧತಿಯಲ್ಲಿ ಹಾಲು ಪರಿ ಪೂರ್ಣ ಆಹಾರವಾಗಿದ್ದು, ಪ್ರತಿ ದಿನ ಒಂದು ಲೋಟ ಹಾಲನ್ನು ಸೇವಿಸುವ ಅಭ್ಯಾಸವನ್ನು ವಿದ್ಯಾರ್ಥಿಗಳು ರೂಢಿಸಿ ಕೊಳ್ಳಬೇಕೆಂದು ಸಿಂಗನಲ್ಲೂರು ಹಾಲು ಶೀತಲೀಕರಣ ಮಂಡಳಿಯ ವಿಸ್ತರಣಾ ಧಿಕಾರಿ ಮಂಜುಳ ಸಲಹೆ ನೀಡಿದರು.

ವಿಶ್ವ ಹಾಲು ದಿನಾಚರಣೆಯ ಅಂಗ ವಾಗಿ ಕಾಮಗೆರೆ ಜೆಎಸ್‍ಎಸ್ ಸಂಸ್ಥೆಯ ಮಹದೇಶ್ವರ ಪ್ರೌಢಶಾಲೆಯಲ್ಲಿ ಕಾಮಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಮುಂದಿನ ಪೀಳಿಗೆ ಆರೋಗ್ಯಯುತ ವಾಗಿರಲಿ ಎಂಬ ನಿಟ್ಟಿನಲ್ಲಿ ಸರ್ಕಾರ ಕೂಡ ಹಾಲಿನ ಮಹತ್ವವನ್ನು ಅರಿತು ಉತ್ತಮ ಕಾರ್ಯಕ್ರಮಗಳನ್ನು ನೀಡಿವೆ. ಅಂಕಿ ಅಂಶ ಗಳ ಪ್ರಕಾರ ಕರ್ನಾಟಕ ರಾಷ್ಟ್ರದಲ್ಲೇ ಅತಿ ಹೆಚ್ಚು ಹಾಲನ್ನು ಉತ್ಪಾದಿಸುವಲ್ಲಿ ಮೊದಲನೇ ಸ್ಥಾನವನ್ನು ಹೊಂದಿದೆ ಎಂದು ತಿಳಿಸಿದರು.
ಕಾಮಗೆರೆ ಹಾಲು ಉತ್ಪಾದಕರ ಸಹ ಕಾರ ಸಂಘದ ಅಧ್ಯಕ್ಷ ಎನ್.ಬಸವರಾಜು ಮಾತನಾಡಿ, ವ್ಯಕ್ತಿಯು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿರಲು ಹಾಲು ಮಹತ್ವದ ಪಾತ್ರವನ್ನು ವಹಿಸು ತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಗಳು ಉತ್ತಮ ಜ್ಞಾನಾರ್ಜನೆ ಪಡೆದು ತಾವು ಓದಿದ ಶಾಲೆಗೆ, ತಂದೆ ತಾಯಿ ಗಳಿಗೆ ಕೀರ್ತಿ ತರಬೇಕು. ಹಾಲು ಉತ್ಪಾ ದಕರ ಸಹಕಾರ ಸಂಘದಿಂದ ಶಾಲೆಗೆ ನಮ್ಮಿಂದಾದ ಸಹಕಾರವನ್ನು ನೀಡಲಾಗು ವುದೆಂದು ಭರವಸೆ ನೀಡಿದರು.

ಶಾಲಾ ಮುಖ್ಯ ಶಿಕ್ಷಕ ಸಿದ್ದಲಿಂಗಸ್ವಾಮಿ ಮಾತನಾಡಿ, ಸರ್ಕಾರಗಳು ಹಾಲಿನ ಮಹ ತ್ವದ ಬಗ್ಗೆ ತಿಳಿದು ಅಕ್ಷರ ದಾಸೋಹದಡಿ ಯಲ್ಲಿ ವಿದ್ಯಾರ್ಥಿಗಳಿಗೆ ಹಾಲನ್ನು ವಿತರಿ ಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳಿಗೆ ಹಾಲು ಮತ್ತು ಬಿಸ್ಕಟ್‍ನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾಮಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಸುರೇಶ್, ಕಾರ್ಯದರ್ಶಿ ಶಿವಲಿಂಗಪ್ಪ, ಕಾರ್ಯದರ್ಶಿಗಳಾದ ಪುಟ್ಟಸ್ವಾಮಿ, ಸುರೇಶ್, ಪ್ರಕಾಶ್, ಬಸವರಾಜಪ್ಪ, ಕಮಲಮ್ಮ, ಮುಖ್ಯ ಶಿಕ್ಷಕ ವಸಂತಕುಮಾರ್, ಶಾಲಾ ಶಿಕ್ಷಕರುಗಳು ವಿದ್ಯಾರ್ಥಿಗಳು ಇದ್ದರು.

Translate »