ರಾಸುಗಳಿಗೆ ಲಸಿಕೆ ಹಾಕಿಸಲು ಸೂಚನೆ
ಚಾಮರಾಜನಗರ

ರಾಸುಗಳಿಗೆ ಲಸಿಕೆ ಹಾಕಿಸಲು ಸೂಚನೆ

June 2, 2018

ಗುಂಡ್ಲುಪೇಟೆ: ಜಾನುವಾರು ಮಾಲೀಕರು ತಮ್ಮ ರಾಸುಗಳಿಗೆ ಕಾಲಕಾಲಕ್ಕೆ ರೋಗ ನಿರೋ ಧಕ ಲಸಿಕೆ ಹಾಕಿಸುವಂತೆ ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು.

ತಾಲೂಕಿನ ಶ್ಯಾನಾಡ್ರಹಳ್ಳಿ ಗ್ರಾಮದಲ್ಲಿ ಪಶುವೈದ್ಯಕೀಯ ಇಲಾಖೆಯ ವತಿ ಯಿಂದ ಅಯೋಜಿಸಿದ್ದ ಕಾಲುಬಾಯಿ ಜ್ವರ ನಿರೋಧಕ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತ, ಎಲ್ಲಾ ರೈತರು ಹಾಗೂ ಜಾನುವಾರು ಮಾಲೀ ಕರು ತಮ್ಮ ರಾಸುಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸಬೇಕು. ಹೆಚ್ಚಿನ ಬೆಲೆ ಕೊಟ್ಟು ಖರೀದಿಸುವುದರಿಂದ ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳಬೇಕು. ಅಕಸ್ಮಾತ್ ರೋಗಗಳಿಂದ ರಾಸುಗಳು ಸಾವಿಗೀಡಾ ದರೆ ಅದರಿಂದ ಉಂಟಾಗುವ ನಷ್ಟದಿಂದ ಪಾರಾಗಬಹುದು ಎಂದರು.

ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಚನ್ನಬಸಪ್ಪ ಮಾತನಾಡಿ, ತಾಲೂಕಿನ ಎಲ್ಲಾಗ್ರಾಮಗಳಲ್ಲಿರುವ ಸುಮಾರು 70 ಸಾವಿರ ಹಸು, ಎತ್ತು, ಎಮ್ಮೆ ಹಾಗೂ ಹಂದಿಗಳಿಗೂ 14ನೇ ಸುತ್ತಿನಲ್ಲಿ ಜೂನ್ 22ರವರೆಗೆ ಕಾಲು ಬಾಯಿ ಜ್ವರದ ಲಸಿಕೆ ಹಾಕಲಾಗುತ್ತದೆ. ಇದಕ್ಕಾಗಿ 7 ತಂಡಗಳಲ್ಲಿ ಸಿಬ್ಬಂದಿಯು ಬೆಳಗ್ಗೆ 6ರಿಂದ ಎಲ್ಲಾ ಗ್ರಾಮಗಳಿಗೂ ತೆರಳಿ ಲಸಿಕೆ ಹಾಕಲಿದ್ದಾರೆ. ಆದ್ದರಿಂದ ಎಲ್ಲರೂ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ರೋಗಗಳು ಹರಡದಂತೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಸ್.ಎಂ.ಮಲ್ಲಿಕಾರ್ಜುನ್, ಮುಖಂಡರಾದ ಮೂಡುಗೂರು ಬಸವ ರಾಜು, ಎನ್.ಮಲ್ಲೇಶ್, ಬಿ.ಎಸ್.ಮಹೇಶ್ ಸೇರಿದಂತೆ ಪಶುವೈದ್ಯರಾದ ಡಾ.ಮಾದೇಶ್, ಡಾ.ಚೇತನ್, ಪಶುಪರೀಕ್ಷಕರಾದ ರಾಮ ಚಂದ್ರ, ಮಹದೇವನಾಯ್ಕ್, ರೇಖಾ, ಮಂಜುನಾಥ್, ಚಾಲಕ ಮಂಜುನಾಥ್ ಇತರರು ಭಾಗವಹಿಸಿದ್ದರು.

Translate »