ಮೈಸೂರು: ಮೈಸೂರಿನ ಸಾತಗಳ್ಳಿಯ ವಿದ್ಯಾಶಂಕರನಗರದಲ್ಲಿರುವ ಕೊಡಗು ಮಾಡೆಲ್ ಸ್ಕೂಲ್‍ನ ಅಭಿವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ (ಎಸ್‍ಕೆಡಿಆರ್‍ಡಿಪಿ) 1 ಲಕ್ಷ ರೂ. ಅನುದಾನವನ್ನು ಗುರುವಾರ ನೀಡಲಾಯಿತು. ಶ್ರೀ ಕಾವೇರಿ ಕೊಡವ ಅಸೋಸಿಯೇಷನ್ ಮೈಸೂರು ಈಸ್ಟ್‍ನ ಆಶ್ರಯದಲ್ಲಿ ನಡೆಯುತ್ತಿರುವ ಕೊಡಗು ಮಾಡೆಲ್ ಸ್ಕೂಲ್‍ನ ಆವರಣದಲ್ಲಿ ಎಸ್‍ಕೆಡಿಆರ್‍ಡಿಪಿ ಮೈಸೂರು ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ್ ಅವರು 1 ಲಕ್ಷ ರೂ. ಮೊತ್ತದ ಚೆಕ್ ಅನ್ನು ಅಸೋಸಿಯೇಷನ್ ಅಧ್ಯಕ್ಷ ಕೆ.ಕೆ.ಅಯ್ಯಪ್ಪ ಅವರಿಗೆ ಹಸ್ತಾಂತರ ಮಾಡಿದರು. ಇದೇ ವೇಳೆ ಮಾತನಾಡಿದ ವಿಜಯಕುಮಾರ್…