ಮೈಸೂರು: ಮಧುಮೇಹ ದಿನದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮೈಸೂರಿನ ಕುವೆಂಪುನಗರದಲ್ಲಿರುವ ಭಾನವಿ ಆಸ್ಪತ್ರೆ ಆವರಣ ದಿಂದ ನಾಳೆ(ನ.23) ಬೆಳಿಗ್ಗೆ 7ಕ್ಕೆ ವಾಕಥಾನ್ ಹಾಗೂ ಆಸ್ಪತ್ರೆಯ ನೂತನ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯ ಡಾ.ಎನ್. ವಿಜಯ ಚೆಲುವರಾಜ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರು ವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನವಿ ಆಸ್ಪತ್ರೆಯ ಆವರಣ ದಿಂದ ಬೆಳಿಗ್ಗೆ 7ಕ್ಕೆ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಅವರು ವಾಕಥಾನ್‍ಗೆ ಚಾಲನೆ…