ಮಧುಮೇಹ ಜಾಗೃತಿಗಾಗಿ ಇಂದು ವಾಕಥಾನ್
ಮೈಸೂರು

ಮಧುಮೇಹ ಜಾಗೃತಿಗಾಗಿ ಇಂದು ವಾಕಥಾನ್

November 23, 2018

ಮೈಸೂರು: ಮಧುಮೇಹ ದಿನದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮೈಸೂರಿನ ಕುವೆಂಪುನಗರದಲ್ಲಿರುವ ಭಾನವಿ ಆಸ್ಪತ್ರೆ ಆವರಣ ದಿಂದ ನಾಳೆ(ನ.23) ಬೆಳಿಗ್ಗೆ 7ಕ್ಕೆ ವಾಕಥಾನ್ ಹಾಗೂ ಆಸ್ಪತ್ರೆಯ ನೂತನ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯ ಡಾ.ಎನ್. ವಿಜಯ ಚೆಲುವರಾಜ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರು ವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನವಿ ಆಸ್ಪತ್ರೆಯ ಆವರಣ ದಿಂದ ಬೆಳಿಗ್ಗೆ 7ಕ್ಕೆ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಅವರು ವಾಕಥಾನ್‍ಗೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಶಾಸಕ ಎಸ್.ಎ.ರಾಮ ದಾಸ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಮೈಸೂರು ಮೆಡಿಕಲ್ ಕಾಲೇಜಿನ ಡೀನ್ ಡಾ.ನಂಜರಾಜ್, ಪಾಲಿಕೆ ಸದಸ್ಯ ರಮೇಶ್, ಮಹಾನ್ ಅಸೋಸಿ ಯೇಷನ್ ಅಧ್ಯಕ್ಷ ಡಾ.ಮಹೇಶ್‍ಕುಮಾರ್ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು. ಆಸ್ಪತ್ರೆ ಆವರಣದಿಂದ ಆರಂಭವಾಗುವ ವಾಕಥಾನ್ ಅಪೋಲೊ, ಅಕ್ಷಯ ಭಂಡಾರ್ ಮೂಲಕ ಸಾಗಿ ಮತ್ತೆ ಆಸ್ಪತ್ರೆ ಆವರಣವನ್ನು ತಲುಪಲಿದೆ. ವಾಕಥಾನ್‍ನಲ್ಲಿ ಆಸ್ಪತ್ರೆ ಸಿಬ್ಬಂದಿಗಳು, ವೈದ್ಯರು, ನರ್ಸ್‍ಗಳು ಪಾಲ್ಗೊಂಡು ಜಾಗೃತಿ ಮೂಡಿಸಲಿದ್ದಾರೆ. ಬಳಿಕ ಆಸ್ಪತ್ರೆಗೆ ಸಮಾ ಲೋಚನೆಗೆ ಬರುವ ಮೊದಲ 50 ಮಧುಮೇಹಿ ರೋಗಿಗಳಿಗೆ ಉಚಿತ ಗ್ಲೂಕೊಮೀಟರ್ ಯಂತ್ರವನ್ನು ಕೊಡುಗೆಯಾಗಿ ನೀಡಲಾಗುವುದು ಎಂದರು. ಗೋಷ್ಠಿಯಲ್ಲಿ ಆಸ್ಪತ್ರೆ ವೈದ್ಯರಾದ ಡಾ.ಪ್ರಶಾಂತ ಗೌಡ, ನರ್ಸಿಂಗ್ ವಿಭಾಗದ ಅಧೀಕ್ಷಕ ನಿರಂಜನಸ್ವಾಮಿ ಇದ್ದರು.

Translate »