ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ: ಜಿಟಿಡಿ
ಮೈಸೂರು

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ: ಜಿಟಿಡಿ

November 23, 2018

ಹನಗೋಡು:  ರಾಜ್ಯದೆಲ್ಲೆಡೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಕೇವಲ ಹಣಕಾಸು ವ್ಯವಹಾರಕ್ಕೆ ಮಾತ್ರ್ರ ಸೀಮಿತವಾಗಿರದೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿಯುತ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಹನಗೋಡಿನಲ್ಲಿ ಧರ್ಮಸ್ಥಳ ಗ್ರಾಮೀಣಾ ಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ -ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಜಾಗೃತಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ, ಧರ್ಮ ಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯು ಪೂಜ್ಯ ಡಿ.ವೀರೇಂದ್ರಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜ್ಯದ ಎಲ್ಲಾ ಭಾಗ ಗಳಲ್ಲೂ ಮಹಿಳಾ ಸ್ವಸಹಾಯ ಸಂಘಗಳ ಸ್ಥಾಪನೆ, ದೇವಾಲಯಗಳ ಜೀರ್ಣೋ ದ್ಧಾರ, ಕೃಷಿಯಂತ್ರ ಧಾರೆ ಸೇವಾ ಕೇಂದ್ರ, ಕೆರೆಕಟ್ಟೆಗಳ ಪುನರ್ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ಸೇರಿದಂತೆ ಶಿಕ್ಷಣ, ಆರೋಗ್ಯ ಸೇವೆಗಳೊಂದಿಗೆ ಗ್ರಾಮೀಣ ಜನರ ಬದುಕು ಹಸನು ಮಾಡಲು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜನರನ್ನು ಜಾಗೃತಿ ಗೊಳಿಸುವುದರೊಂದಿಗೆ ಸ್ವಉದ್ಯೋಗ, ಸ್ವಾವ ಲಂಬನೆಯ ಜೀವನ ನಡೆಸಲು ಮಾರ್ಗದರ್ಶನ ನೀಡಲಾಗುತ್ತಿದೆ. ಈ ಯೋಜನೆಯಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿ ಕೊಂಡು ಉತ್ತಮ ರೀತಿಯ ಜೀವನ ರೂಪಿಸಿ ಕೊಳ್ಳಬೇಕೆಂದು ಸಲಹೆ ನೀಡಿದರು.

ಶಾಸಕ ಹೆಚ್.ವಿಶ್ವನಾಥ್ ಮಾತನಾಡಿ, ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಸಂಪುಟದಲ್ಲಿ ಸಹಕಾರ ಸಚಿವನಾಗಿದ್ದ ಅವಧಿಯಲ್ಲಿ ರಾಜ್ಯದೆಲ್ಲೆಡೆ ಮಹಿಳಾ ಸಬಲೀಕರಣವಾಗಲು ಸ್ತ್ರೀಶಕ್ತಿ ಸಂಘಟನೆ ಹುಟ್ಟು ಹಾಕಿದ್ದೆ. ಮಹಿಳೆಯರು ಆರ್ಥಿಕವಾಗಿ ಬದುಕು ಹಾಗೂ ವ್ಯವಹಾರ ಜ್ಞಾನದೊಂದಿಗೆ ನೂರಾರು ಕೋಟಿ ರೂ ಉಳಿತಾಯ ಮಾಡಿಸಿ ಮಹಿಳಾ ಸಬಲೀಕರಣದ ಕ್ರಾಂತಿಯನ್ನೇ ಮಾಡಲಾಗಿತ್ತು ರಾಜ್ಯದಲ್ಲಿ ಇಂದಿಗೂ ಮಹಿಳಾ ಸ್ವ ಸಹಾಯ ಸಂಘಗಳು ಉತ್ತಮ ರೀತಿ ಯಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣದ ಬೇಬಿ ಮಠ ಮತ್ತು ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಕಟ್ಟನಾಯಕ, ಗ್ರಾಪಂ ಹನಗೋಡು ಗ್ರಾಪಂ ಅಧ್ಯಕ್ಷ ಹೆಚ್.ಬಿ.ಮಧು, ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ, ತಾಪಂ ಸದಸ್ಯರಾದ ರೂಪ ನಂದೀಶ್, ಪುಷ್ಪಲತಾ ಗಣಪತಿ, ಮಂಜುಳ, ಯೋಜನೆಯ ತಾಲೂಕು ಯೋಜನಾಧಿಕಾರಿ ಯಶೋಧಶೆಟ್ಟಿ, ಪೂಜಾ ಸಮಿತಿಯ ಅಧ್ಯಕ್ಷ ದಾ.ರಾ,ಮಹೇಶ್, ಇ.ಒ.ಕೃಷ್ಣ ಕುಮಾರ್ ಮೇಲ್ವಿಚಾರಕಿ ಸರೋಜ ಸೇರಿದಂತೆ ಇತರರು ಭಾಗವಹಿಸಿದ್ದರು.

Translate »