ಮೈಸೂರು-ಸರಗೂರು ತಡೆರಹಿತ ಬಸ್ ಸೇವೆ ಸಂಸದ, ಶಾಸಕ, ಜಿಪಂ ಅಧ್ಯಕ್ಷರಿಂದ ಚಾಲನೆ
ಮೈಸೂರು

ಮೈಸೂರು-ಸರಗೂರು ತಡೆರಹಿತ ಬಸ್ ಸೇವೆ ಸಂಸದ, ಶಾಸಕ, ಜಿಪಂ ಅಧ್ಯಕ್ಷರಿಂದ ಚಾಲನೆ

November 23, 2018

ಸರಗೂರು:  ಪ್ರಯಾಣಿಕರ ಅನುಕೂಲಕ್ಕಾಗಿ ಸರಗೂರು-ಮೈಸೂರು ನಡುವೆ ಪ್ರತಿ ಒಂದು ಗಂಟೆಗೆ ತಡೆರಹಿತ ಬಸ್ ಓಡಿಸಲಾಗುತ್ತದೆ. ಪ್ರಯಾಣಿಕರು ಈ ಸೇವೆ ಸದುಪಯೋಗ ಪಡಿಸಿಕೊಳ್ಳುವಂತೆ ಸಂಸದ ಆರ್.ಧ್ರುವ ನಾರಾಯಣ್ ತಿಳಿಸಿದರು. ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ತಡೆ ರಹಿತ ಬಸ್ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸರಗೂರು ಹಾಗೂ ಗ್ರಾಮೀಣ ಭಾಗದ ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ತಡೆರಹಿತ ಬಸ್‍ನಿಂದ ಅನುಕೂಲವಾಗಲಿದೆ ಎಂದರು. ಶಾಸಕ ಅನಿಲ್ ಚಿಕ್ಕಮಾದು, ಮಾತನಾಡಿ, ವರ್ತಕರ ಹಾಗೂ ವಿವಿಧ ಸಂಘ ಸಂಸ್ಥೆಗಳ ಮನವಿ ಮೇರೆಗೆ ಪ್ರತಿದಿನ ಬೆಳಿಗ್ಗೆ 6.30ರಿಂದ ರಾತ್ರಿ 8.30ರ ತನಕ ಸರಗೂರಿನಿಂದ ಮೈಸೂರಿಗೆ ಪ್ರತಿ ಒಂದು ಗಂಟೆಗೆ ತಡೆರಹಿತ ಬಸ್ ಅನ್ನು ಕೆಎಸ್‍ಆರ್‍ಟಿಸಿ ಸಂಸ್ಥೆ ವತಿಯಿಂದ ಬಿಡಲಾಗಿದೆ ಎಂದರು. ಬಸ್ ಚಾಲನೆ ಕಾರ್ಯಕ್ರಮದಲ್ಲಿ ಕೆಎಸ್‍ಆರ್‍ಟಿಸಿ ಅಧಿಕಾರಿಗಳಾದ ಡಿಸಿ ವಾಸು, ಡಿ.ಎಂ.ಇ. ವೀರೇಶ್. ಡಿಟಿಓ ದಶರಥ, ಎಸ್.ಓ.ಶಿವರಾಜೇಗೌಡ, ಡಿ.ಎಂ.ತ್ಯಾಗರಾಜ್, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ್, ಸರಗೂರು ತಾಲೂಕು ತಹಶೀಲ್ದಾರ್ ಪ್ರಸನ್ನಮೂರ್ತಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ನಂದಿನಿ ಚಂದ್ರಶೇಖರ್, ಕೆಪಿಸಿಸಿ ಸದಸ್ಯೆ ಜಯಮಂಗಳ, ಕೋಟೆ ಪುರಸಭೆ ಸದಸ್ಯ ನರಸಿಂಹಮೂರ್ತಿ, ಮಾಜಿ ಸದಸ್ಯ ಚಿಕ್ಕವೀರನಾಯಕ, ತಾಲೂಕು ಪಂಚಾಯಿತಿ ಸದಸ್ಯ ತುಂಬಸೋಗೆ ಅಂಕನಾಯಕ, ಪಟ್ಟಣ ಪಂಚಾಯಿತಿ, ಮುಖ್ಯಾಧಿಕಾರಿ ಅಶೋಕ್, ಅಧ್ಯಕ್ಷೆ ಜ್ಯೋತಿ ಯೋಗೀಶ್, ಸದಸ್ಯರಾದ ರತ್ನರಂಗನಾಥ್, ಭಾಗ್ಯಲಕ್ಷ್ಮಿ ಬಿಲ್ಲೇಶ್, ನಾಗಯ್ಯ, ವರ್ತಕರ ಸಂಘದ ಅಧ್ಯಕ್ಷ ಕೃಷ್ಣಚಾರ್, ಮುಖಂಡರಾದ, ಮಂಜುನಾಥ್, ಬ್ರಹ್ಮದೇವಯ್ಯ, ನಾಗರಾಜು, ಭೀಮರಾಜ್, ಮೋಹನ್‍ಕುಮಾರ್, ಹರಿದಾಸ್, ಬೀರ್ವಾಳ್ ಚಿಕ್ಕಣ್ಣ, ಇನ್ನಿತರರು ಉಪಸ್ಥಿತರಿದ್ದರು.

Translate »