ಪಿರಿಯಾಪಟ್ಟಣ: ಕನ್ನಡ ನಾಡು-ನುಡಿ, ಭಾಷೆಯ ವಿಚಾರದಲ್ಲಿ ನನ್ನ ಸಂಪೂರ್ಣ ಸಹಕಾರವಿದ್ದು, ಪ್ರತಿ ಯೊಬ್ಬರೂ ಭಾಷಾಭಿಮಾನ ಹೆಚ್ಚಿಸಿ ಕೊಂಡು ಅನ್ಯಭಾಷಿಕರಿಗೆ ಕನ್ನಡ ಕಲಿ ಸುವ ಕೆಲಸ ಮಾಡಬೇಕು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ತಾಲೂಕಿನ ರಾವಂದೂರು ಗ್ರಾಮಸ್ಥ ರಿಂದ ಪವಿತ್ರ ಗ್ರಂಥಗಳು, ಕಾದಂಬರಿಗಳು ಹಾಗೂ ಸಾಹಿತ್ಯ ಕ್ಷೇತ್ರದ ದಿಗ್ಗಜರುಗಳ ಪುಸ್ತಕಗಳೊಂದಿಗೆ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಗ್ರಾಮದ ಕುಂದು ಕೊರತೆಗಳ ಸಭೆಗೆ ಆಗಮಿಸಿದ ನನಗೆ ಕನ್ನಡ ರಾಜ್ಯೋತ್ಸವದ ನಿಮಿತ್ತ ಗ್ರಾಮದ ಮುಖಂಡರು, ಕನ್ನಡ ಪುಸ್ತಕಗಳನ್ನು ನೀಡಿ ಕನ್ನಡ ಭಾಷಾಭಿ ಮಾನವನ್ನು ಹೆಚ್ಚಿಸುವುದರ ಮುಖಾಂತರ ಸನ್ಮಾನಿಸುತ್ತಿರುವುದು ಸಂತಸವಾಗಿದೆ. ಇದೇ ಮೊದಲ ಬಾರಿಗೆ ವಿನೂತನ ಶೈಲಿಯಲ್ಲಿ ಸನ್ಮಾನಿಸಿದ ರಾವಂದೂರು ಗ್ರಾಮಸ್ಥರಿಗೆ ಅಭಾರಿಯಾಗಿದ್ದೇನೆ. ಸನ್ಮಾನಗಳು ನನ್ನ ಜವಬ್ದಾರಿಗಳನ್ನು ಹೆಚ್ಚಿಸಿದ್ದು, ಎಚ್ಚರಿಕೆ ಯಿಂದ ಹೆಜ್ಜೆ ಇಡುವಂತೆ ಮನವರಿಕೆ ಮಾಡಿಕೊಡುತ್ತಿವೆ. ಅಧಿಕಾರಾವಧಿಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯು ಮೂಲ ಭೂತ ಸೌಕರ್ಯಗಳಿಂದ ವಂಚಿತರಾಗ ದಂತೆ ನಿಗಾ ವಹಿಸುತ್ತೇನೆ ಎಂದರು.
ಈ ಹಿಂದೆ ತಾಲೂಕಿನಲ್ಲಿ ಆಡಳಿತ ನಡೆಸಿ ದವರಲ್ಲಿ ಮಾಜಿ ಸಚಿವ ಹೆಚ್.ಎಂ.ಚನ್ನ ಬಸಪ್ಪನವರನ್ನು ಬಿಟ್ಟರೆ ಮಿಕ್ಕ ಜನಪ್ರತಿನಿಧಿ ಗಳು ಬರೀ ಬಾಯಿ ಮಾತಲ್ಲಿ ತಾಲೂಕಿನ ಅಭಿವೃದ್ಧಿ ಮಾಡಿದ್ದೇನೆಂದು ಚುನಾವಣಾ ಸಂದರ್ಭ ಹೇಳುತ್ತಿದ್ದರು, ತಾಲೂಕಿನ ಯಾವ ಯಾವ ಗ್ರಾಮಗಳಿಗೆ ಎಷ್ಟು ಅನುದಾನ ನೀಡಿದ್ದಾರೆಂದು ತಿಳಿಸಲಿ. ಗ್ರಾಮ ಸಂದರ್ಶನದ ವೇಳೆ ಪ್ರತಿ ಗ್ರಾಮಗಳಲ್ಲೂ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ದೂರುಗಳು ಬರುತ್ತಿದ್ದು, ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದೇನೆ. ತಾಲೂಕಿನ 314 ಹಳ್ಳಿಗಳನ್ನೂ ಹಂತಹಂತವಾಗಿ ಅಭಿವೃದ್ಧಿಪಡಿಸುತ್ತೇನೆ ಎಂದರು.
ಪ್ರಸ್ತುತ ಗ್ರಾ.ಪಂ. ಇರುವ ವಾಣಿಜ್ಯ ಕೇಂದ್ರ ರಾವಂದೂರನ್ನು ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಪಟ್ಟಣ ಪಂಚಾ ಯಿತಿಯಾಗಿ ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಗ್ರಾಮದ ಮುಖಂಡ, ವಾಣಿಜ್ಯೋದ್ಯಮಿ ಆರ್.ಎಲ್.ಮಣಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಸಿ.ಎನ್.ರವಿ, ಮಾಜಿ ಜಿ.ಪಂ.ಸದಸ್ಯ ಶಿವಣ್ಣ, ತಾ.ಪಂ.ಸದಸ್ಯ ಮಲ್ಲಿಕಾರ್ಜುನ್, ರಾವಂದೂರು ಪಿಎಸಿಎಸ್ ಅಧ್ಯಕ್ಷ ವಿಜಯ್‍ಕುಮಾರ್, ಮುಖಂಡ ರಾದ ಅಣ್ಣಯ್ಯಶೆಟ್ಟಿ, ಪ್ರೇಮ್‍ಕುಮಾರ್, ರಘುನಾಥ್, ಶಿವಾರಾಧ್ಯ, ನದೀಮ್, ಅನ್ವರ್, ಕುಮಾರ್, ವಿವಿಧ ಇಲಾಖಾ ಅಧಿಕಾರಿ ಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.