ಮೈಸೂರಿನ ಓಶೋ ಗ್ಲಿಂಪ್ಸೆಯಲ್ಲಿ  ಡಾ. ಅರಣ್ಯಕುಮಾರ್ ಅವರಿಂದ ಹಿಂದೂಸ್ಥಾನಿ ಸಂಗೀತ
ಮೈಸೂರು

ಮೈಸೂರಿನ ಓಶೋ ಗ್ಲಿಂಪ್ಸೆಯಲ್ಲಿ  ಡಾ. ಅರಣ್ಯಕುಮಾರ್ ಅವರಿಂದ ಹಿಂದೂಸ್ಥಾನಿ ಸಂಗೀತ

November 23, 2018

ಮೈಸೂರು: ಮೈಸೂರಿನ ಗೋಕುಲಂ 2ನೇ ಹಂತ, 6ನೇ ಮೇನ್, 16ನೇ ಕ್ರಾಸ್‍ನಲ್ಲಿರುವ ನಂ. 349 ಇಲ್ಲಿ ಓಶೋ ಗ್ಲಿಂಪ್ಸೆ ಯಲ್ಲಿ ನ.24ರಂದು ಸಂಜೆ 5.30ರಿಂದ 6.30 ರವರೆಗೆ ವಿಶ್ವ ವಿಖ್ಯಾತ ಸಂಗೀತ ಕಲಾವಿದ ಡಾ. ಅರಣ್ಯಕುಮಾರ್ ಅವರಿಂದ ಹಿಂದೂಸ್ಥಾನಿ ಸಂಗೀತ ವಾದ್ಯ ದಿಲ್‍ರುಬಾ ಮತ್ತು ಈಸ್‍ರಾಜ್ ಸಂಗೀತ ಕಛೇರಿಯನ್ನು ಆಯೋಜಿಸಲಾ ಗಿದೆ. ಪ್ರವೇಶ ಉಚಿತವಾಗಿದ್ದು, ಸಂಗೀತಾಸಕ್ತರು 10 ನಿಮಿಷ ಮುಂಚಿತವಾಗಿ ಹಾಜರಿರಬೇಕು.

ಕಲಾವಿದರ ಪರಿಚಯಡಾ. ಅರಣ್ಯಕುಮಾರ್ ಅವರು `ಟ್ರೀಟ್ ಮೆಂಟ್ ಆಫ್ ಕಂಪೋಸಿಷನ್ ಇನ್ ಡಿಫ ರೆಂಟ್ ಟ್ರೇಡಿಷನ್ ಆಫ್ ಸಿತಾರ್ ಅಂಡ್ ಸಾರೋಡ್’ ಶೀರ್ಷಿಕೆಯಡಿ ಪಿಹೆಚ್.ಡಿ ಸಂಶೋ ಧನೆ ನಡೆಸಿದ್ದಾರೆ. ಅಲ್ಲದೆ ಧಾರವಾಡ ಕರ್ನಾ ಟಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಇನ್ಸ್‍ಟ್ರುಮೆಂಟಲ್ ಮ್ಯೂಸಿಕ್-ಸಿತಾರ್ ಮಾಸ್ಟರ್ ಡಿಗ್ರಿಯಲ್ಲಿ ಅದೇ ವಿಶ್ವ ವಿದ್ಯಾನಿಲಯದಿಂದ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಸಂಗೀತ ಶಿಕ್ಷಕರಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು, 2003ರಿಂದ ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಇನ್ಸ್‍ಟ್ರುಮೆಂಟಲ್ ಮ್ಯೂಸಿಕ್‍ನ ಅತಿಥಿ ಉಪನ್ಯಾ ಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, 2011 ರಿಂದ ಹುಬ್ಬಳ್ಳಿಯ ಡಾ. ಗಂಗೂ ಬಾಯಿ ಹಾನಗಲ್ ಗುರುಕುಲದಲ್ಲಿ ಇನ್ಸ್‍ಟ್ರುಮೆಂಟಲ್ ಮ್ಯೂಸಿಕ್‍ನ ಅತಿಥಿ ಬೋಧಕ ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿತಾರ್, ದಿಲ್‍ರುಬಾ, ಸಾರೋಡ್, ಸಂತೂರ್ ಇನ್ನಿತರ ಸಂಗೀತ ಪರಿಕರಗಳಲ್ಲಿ ಹಿಂದೂಸ್ಥಾನಿ ಸಂಗೀತ ಪ್ರಕಾರದಲ್ಲಿ ಸಮರ್ಥ ಶಿಕ್ಷಕರಾಗಿದ್ದಾರೆ.

Translate »