ಮೈಸೂರು: ತಮ್ಮ ಆಸ್ತಿ-ಪಾಸ್ತಿ ರಕ್ಷಣೆಗೆ ‘ಡಿಜಿಟಲ್ ಆಸ್ತಿ ಕಾರ್ಡ್’ ಸಹಕಾರಿ ಎಂದು ಅರ್ಬನ್ ಪ್ರಾಪರ್ಟಿ ಓನರ್‍ಶಿಪ್ ರೆಕಾರ್ಡ್ (ಯುಪಿಓಆರ್) ಯೋಜನಾಧಿಕಾರಿ ಪ್ರಸಾದ್ ವಿ.ಕುಲಕರ್ಣಿ ತಿಳಿಸಿದರು. ಯಾದವಗಿರಿಯ ಮೈಸೂರು ಗ್ರಾಹಕ ಪರಿಷತ್ತು ಕಚೇರಿಯಲ್ಲಿ ನಡೆದ ಮೈಗ್ರಾಪ ಸಾಮಾನ್ಯ ಸಭೆಯಲ್ಲಿ ‘ಆಸ್ತಿ ಹಕ್ಕು’ ವಿಷಯ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರಿ, ಖಾಸಗಿ ಮತ್ತು ಸಾರ್ವಜನಿಕರ ಆಸ್ತಿ-ಪಾಸ್ತಿಗಳ ಒತ್ತುವರಿಗೆ ಇನ್ನು ಮುಂದೆ ಶಾಶ್ವತವಾಗಿ ಬ್ರೇಕ್ ಬೀಳಲಿದೆ. ಈ ಉದ್ದೇಶ ಈಡೇರಿಕೆ ಗಾಗಿಯೇ ಕಂದಾಯ ಇಲಾಖೆಯು ನಗರ ಆಸ್ತಿ ಮಾಲೀಕತ್ವದ…