ಮೈಸೂರು: ನದಿಗಳನ್ನು ಮನುಷ್ಯ ಸೃಷ್ಟಿಸಿಲ್ಲ. ಹಾಗಾಗಿ ನೈಸರ್ಗಿಕವಾಗಿ ಹರಿಯು ತ್ತಿರುವ ನದಿಗಳ ಜೋಡಣೆಗೆ ಮುಂದಾಗುವುದು ಮಹಾಪರಾಧ ಎಂದು ಖ್ಯಾತ ಪರಿಸರ ತಜ್ಞ ಡಾ.ಎ.ಎನ್. ಯಲ್ಲಪ್ಪರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಹಾ.ಮಾ.ನಾ. ಪ್ರತಿಷ್ಠಾನದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಡಾ.ಹಾ.ಮಾ.ನಾಯಕ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ `ಭಾರತದ ಪ್ರಸ್ತುತ ಸಾಮಾಜಿಕ ಮತ್ತು ಪರಿಸರ ವಿದ್ಯಮಾನಗಳು’ ವಿಷಯ ಕುರಿತು ಮಾತನಾಡಿದ ಅವರು, ನದಿ ಜೋಡಣೆ ಮತ್ತು ನದಿ ತಿರುಗಿಸುವಿಕೆ ಪರಿಸರ ವಿರೋಧಿಯಾಗಿದೆ. ನದಿಗಳು ಎಲ್ಲಿ…