ಮೈಸೂರು: ಮಾಹಿತಿ ಹಕ್ಕು ಅಧಿನಿಯಮ 2005ರ ಅಡಿಯಲ್ಲಿ ಮಾಹಿತಿ ಪಡೆಯುವ ನಾಗರಿ ಕರು `ಆರ್‍ಟಿಐ ಕಾರ್ಯಕರ್ತ’ ಎಂಬ ಪದನಾಮದಿಂದ ಸರ್ಕಾರಿ ಕಚೇರಿಗಳಲ್ಲಿ ಪರಿಚಯಿಸಿಕೊಳ್ಳಲು ಹಾಗೂ ಮಾಹಿತಿ ಪಡೆಯಲು ಅವಕಾಶವಿಲ್ಲ ಎಂದು ಮಾಹಿತಿ ಆಯೋಗದ ಮುಖ್ಯ ಆಯುಕ್ತ ಡಾ. ಸುಚೇತನ ಸ್ವರೂಪ್ ಸ್ಪಷ್ಟಪಡಿಸಿದರು. ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿ ಗಳೊಂದಿಗೆ ಸಂವಾದ ನಡೆಸಿ, ಮಾತನಾಡಿ ದರು. ಇತ್ತೀಚೆಗೆ `ಆರ್‍ಟಿಐ ಕಾರ್ಯ ಕರ್ತ’ ಪದನಾಮದೊಂದಿಗೆ ಸರ್ಕಾರಿ ಕಚೇರಿಗಳಿಗೆ ಖಾಸಗಿ ವ್ಯಕ್ತಿಗಳು ಬಂದು ಪರಿಚಯ…