`ಆರ್‍ಟಿಐ ಕಾರ್ಯಕರ್ತ’ ಎಂದು ಹೇಳಿ ಸರ್ಕಾರಿ ಕಚೇರಿಗಳಲ್ಲಿ ಮಾಹಿತಿ ಪಡೆಯಲು ಅವಕಾಶವಿಲ್ಲ
ಮೈಸೂರು

`ಆರ್‍ಟಿಐ ಕಾರ್ಯಕರ್ತ’ ಎಂದು ಹೇಳಿ ಸರ್ಕಾರಿ ಕಚೇರಿಗಳಲ್ಲಿ ಮಾಹಿತಿ ಪಡೆಯಲು ಅವಕಾಶವಿಲ್ಲ

August 7, 2018

ಮೈಸೂರು: ಮಾಹಿತಿ ಹಕ್ಕು ಅಧಿನಿಯಮ 2005ರ ಅಡಿಯಲ್ಲಿ ಮಾಹಿತಿ ಪಡೆಯುವ ನಾಗರಿ ಕರು `ಆರ್‍ಟಿಐ ಕಾರ್ಯಕರ್ತ’ ಎಂಬ ಪದನಾಮದಿಂದ ಸರ್ಕಾರಿ ಕಚೇರಿಗಳಲ್ಲಿ ಪರಿಚಯಿಸಿಕೊಳ್ಳಲು ಹಾಗೂ ಮಾಹಿತಿ ಪಡೆಯಲು ಅವಕಾಶವಿಲ್ಲ ಎಂದು ಮಾಹಿತಿ ಆಯೋಗದ ಮುಖ್ಯ ಆಯುಕ್ತ ಡಾ. ಸುಚೇತನ ಸ್ವರೂಪ್ ಸ್ಪಷ್ಟಪಡಿಸಿದರು.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿ ಗಳೊಂದಿಗೆ ಸಂವಾದ ನಡೆಸಿ, ಮಾತನಾಡಿ ದರು. ಇತ್ತೀಚೆಗೆ `ಆರ್‍ಟಿಐ ಕಾರ್ಯ ಕರ್ತ’ ಪದನಾಮದೊಂದಿಗೆ ಸರ್ಕಾರಿ ಕಚೇರಿಗಳಿಗೆ ಖಾಸಗಿ ವ್ಯಕ್ತಿಗಳು ಬಂದು ಪರಿಚಯ ಮಾಡಿಕೊಳ್ಳುತ್ತಿದ್ದಾರೆ.

ಈ ಪದನಾಮದಿಂದ ಗುರುತಿಸಿಕೊಳ್ಳು ವವರಿಗೆ ಮಾಹಿತಿ ನೀಡಬಹುದೇ ಎಂದು ಅಧಿಕಾರಿಯೊಬ್ಬರು, ಆಯುಕ್ತರ ಗಮನಕ್ಕೆ ತಂದಾಗ, ಇದಕ್ಕೆ ಉತ್ತರಿಸಿದ ಆಯುಕ್ತರು, ಆ ವ್ಯಕ್ತಿಗೆ ಸಂಬಂಧಿಸದ ಮಾಹಿತಿ ಕಲೆ ಹಾಕಲು `ಆರ್‍ಟಿಐ ಕಾರ್ಯಕರ್ತ’ರ ಹೆಸರಿ ನಲ್ಲಿ ಮಾಹಿತಿ ನೀಡಲು ಈ ಕಾಯಿದೆ ಯಲ್ಲಿ ಅವಕಾಶವಿಲ್ಲ. ಈ ವ್ಯಕ್ತಿ ಸಂಘಟನೆ ಹೆಸರಿನಲ್ಲಿ ಮಾಹಿತಿ ಪಡೆಯಲು ಅರ್ಜಿ ಸಲ್ಲಿಸಿದರೆ, ಇದಕ್ಕೆ ಮಾನ್ಯತೆ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರ ಲ್ಲದೆ, ಆದರೆ, ಈ ವಿಷಯದಲ್ಲಿ ಯಾವುದೇ ಸಂಘಟನೆಗೆ ಸೇರಿರದ ವ್ಯಕ್ತಿಗಳಿಗೆ ಸಾರ್ವ ಜನಿಕ ಹಿತಾಸಕ್ತಿಗೆ ಅನುಗುಣವಾಗಿ ನೀಡಬಹುದು ಎಂದರು.

ರಾಷ್ಟ್ರಪತಿ ಕಚೇರಿ ಹೊರತು(ಕೆಲ ವಿಷಯ ಗಳಿಗೆ ಸೀಮಿತವಾಗಿ)ಪಡಿಸಿ ಸರ್ಕಾರಿ ಕಚೇರಿಗಳು, ಶೇ.50 ರಷ್ಟು ಸರ್ಕಾರದಿಂದ ಅನುದಾನ ಪಡೆಯುವ ಸಂಘ-ಸಂಸ್ಥೆಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರಲಿವೆ ಎಂದರು.

ಈ ಕಾಯ್ದೆ ಅಡಿಯಲ್ಲಿ ತನಿಖಾ ವರದಿ ಗಳು, ಸ್ಥಳ ಮಹಜರು ಪ್ರತಿ, ಸರ್ಕಾರಿ ನೌಕರರ ವೈಯಕ್ತಿಕ ವಿವರ, ಖಾಸಗಿ ಸಂಘ- ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಸರ್ಕಾರಿ ನೌಕರರ ವಿರುದ್ಧ ಕೈಗೊಂಡ ಇಲಾಖಾ ಶಿಸ್ತು ಕ್ರಮದ ಬಗ್ಗೆ ಮಾಹಿತಿ ಕೊಡುವಂ ತಿಲ್ಲ. ಆದರೆ, ಕೆಲವೊಂದು ವಿಷಯಗಳಿಗೆ ಆಯಾಯ ಸಮಕ್ಷಮ ಪ್ರಾಧಿಕಾರದ ಅಧಿಕಾರಿ ಗಳ ವಿವೇಚನೆ ಆಧರಿಸಿ, ಮಾಹಿತಿ ನೀಡಬಹುದು ಎಂದು ತಿಳಿಸಿದರು.

ಬಹಳ ಅಗತ್ಯ ಎನಿಸಿದರೆ ಖಾಸಗಿ ಸಂಸ್ಥೆಗಳ ಮಾಹಿತಿಯನ್ನು ಸಹ ಸೂಕ್ತ ಪ್ರಾಧಿಕಾರದ ಮೂಲಕ ಪಡೆಯಬಹುದು. ಮಾಹಿತಿ ಹಕ್ಕು ಅಧಿನಿಯಮ 2005ರ ಅಡಿಯಲ್ಲಿ ಸಲ್ಲಿಕೆ ಮಾಡುವ ಅರ್ಜಿಗಳಿಗೆ ಸಂಬಂಧಿಸಿದಂತೆ ನಿಮ್ಮಲ್ಲಿ ಮಾಹಿತಿ ಲಭ್ಯ ವಿಲ್ಲದಿದ್ದರೆ. ಮತ್ತೊಂದು ಕಚೇರಿಗೆ ಈ ಅಧಿನಿಯಮದ ಸೆಕ್ಷನ್ 6(3) ರ ರಡಿ ಯಲ್ಲಿ ಮತ್ತೊಂದು ಪ್ರಾಧಿಕಾರಕ್ಕೆ ವರ್ಗಾ ಯಿಸಬಹುದು ಆದರೆ ಒಂದೇ ಅರ್ಜಿ ಯನ್ನು ಹಲವಾರು ಕಚೇರಿಗಳಿಗೆ ವರ್ಗಾ ಯಿಸುವಂತಿಲ್ಲ ಎಂದು ಹೇಳಿದರು.

ಹಲವಾರು ವರ್ಷಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕೇಳಿದರೆ, ಒಂದು ವರ್ಷದ ಮಾಹಿತಿ ಕೊಟ್ಟು ವಿಲೇವಾರಿ ಮಾಡಬಹುದು. ಆದರೆ, ಮಾಹಿತಿ ಹಕ್ಕು ಕಾಯ್ದೆ ಸಾರ್ವಜನಿಕರ ಸದುದ್ದೇಶದಿಂದ ಬಳಕೆಯಾಗಬೇಕು. ಇದರಿಂದ ದೇಶದಲ್ಲಿ ಸಂಪತ್ತು ಭ್ರಷ್ಟಾಚಾರದ ಮೂಲಕ ಒಂದು ಕಡೆ ಕೇಂದ್ರೀಕರಣವಾಗುವುದನ್ನು ತಡೆ ಗಟ್ಟಬಹುದು ಹಾಗೂ ಕಳೆದೊಂದು ವರ್ಷದಿಂದ ಮಾಹಿತಿ ಹಕ್ಕು ಕಾಯ್ದೆ ಅಡಿ ಮೂರನೇ ವ್ಯಕ್ತಿಗೆ ಸಂಬಂಧಿಸಿದ ಮಾಹಿತಿ ನೀಡುವ ಕುರಿತು ವಿವಿಧ ರಾಜ್ಯಗಳ ಹೈಕೋರ್ಟ್‍ನಲ್ಲಿ ವಿಚಾರಣೆ ನಡೆದು ತೀರ್ಪುಗಳು ಬಂದಿವೆ. ಈ ತೀರ್ಪುಗಳನ್ನು ಕೋಟ್ ಮಾಡಿ ಅಂತಹ ಅರ್ಜಿಗಳನ್ನು ತಿರಸ್ಕರಿಸಬಹುದಾಗಿದೆ ಎಂದರು.

ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ಮುಡಾ ಕಾರ್ಯದರ್ಶಿ ಸವಿತಾ, ನಂಜನಗೂಡು ನಗರ ಸಭೆ ಕಂದಾಯ ನಿರೀಕ್ಷಕ ಬಿ.ವಿ. ವೆಂಕ ಟೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ರಾಧಾ, ಮೈಸೂರು ತಾಲೂಕು ತಹಶೀಲ್ದಾರ್ ರಮೇಶ್ ಬಾಬು, ಡಿಸಿಆರ್‍ಬಿ ಇನ್ಸ್‍ಪೆಕ್ಟರ್ ಕಾಂತರಾಜು ಸೇರಿದಂತೆ ಇತರೆ ಅಧಿಕಾರಿಗಳಿದ್ದರು.

ಇದಕ್ಕೂ ಮುನ್ನ ಬೆಳಿಗ್ಗೆ ಕರ್ನಾಟಕ ಮಾಹಿತಿ ಆಯೋಗಕ್ಕೆ ಸಲ್ಲಿಕೆಯಾಗಿದ್ದ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ವಿಚಾ ರಣೆ ನಡೆಸಿದರು. ವಿವಿಧ ಗ್ರಾಮ ಪಂಚಾ ಯಿತಿಗಳು ಕಬಿನಿ ನಾಲಾ ವಿತರಣಾ ವಿಭಾಗ, ವಾಣಿಜ್ಯ ತೆರಿಗೆ ಕಚೇರಿ, ಲೋಕೋಪಯೋಗಿ ಇಲಾಖೆ, ಸೆಸ್ಕ್ ಸಾರ್ವಜನಿಕ ಶಿಕ್ಷಣ ಇಲಾಖೆ, ತಹಶೀಲ್ದಾರ್ ಕಚೇರಿಗಳು, ಕೃಷಿ ಇಲಾಖೆ, ಖಾಸಗಿ ಕಾಲೇಜು, ಮಹಿಳಾ ಪೊಲೀಸ್ ಠಾಣೆ ಮುಂತಾದ ಕಚೇರಿಗಳಿಗೆ ಸಂಬಂಧಿಸಿದಂತೆ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿದರು.

Translate »