ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪನಕ್ಕೆ ಕನಿಷ್ಠ 82 ಮಂದಿ ಬಲಿ
ಮೈಸೂರು

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪನಕ್ಕೆ ಕನಿಷ್ಠ 82 ಮಂದಿ ಬಲಿ

August 7, 2018

ಜಕಾರ್ತ: ಇಂಡೋನೇಷ್ಯಾ ದಲ್ಲಿ ಪ್ರಬಲ ಭೂಕಂಪನ ಸಂಭವಿ ಸದ್ದು, ಘಟನೆಯಲ್ಲಿ ಕನಿಷ್ಠ 82 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಆಗ್ನೇಯ ಏಷ್ಯಾದ ಪ್ರಮುಖ ಪ್ರವಾಸಿ ತಾಣ ಇಂಡೋನೇಷ್ಯಾದ ಪ್ರಮುಖ ಕರಾವಳಿ ದ್ವೀಪ ಬಾಲಿಯಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.0ರಷ್ಟು ತೀವ್ರತೆ ದಾಖಲಾಗಿದೆ. ಭೂ ಕಂಪನದ ತೀವ್ರತೆಗೆ ಬಾಲಿ ಸೇರಿದಂತೆ ಅದರ ಸುತ್ತಮುತ್ತಲ ಪ್ರದೇಶಗಳಲ್ಲಿನ ಬಹುಮಹಡಿ ಕಟ್ಟಡಗಳು ನೆಲಕ್ಕುರು ಳಿದ್ದು, ಈ ವೇಳೆ ಕನಿಷ್ಠ 82 ಮಂದಿ ಸಾವನ್ನಪ್ಪಿ, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಂತೆಯೇ ನೂರಾರು ಮಂದಿ ನಾಪತ್ತೆಯಾಗಿ ದ್ದಾರೆ ಎನ್ನಲಾಗಿದೆ. ಇನ್ನು ಭೂಕಂಪನ ದಿಂದಾಗಿ ಲೊಂಬಾಕ್ ರಾಜ್ಯದ ಮಟರಮ್ ನಗರದಲ್ಲಿ ಭಾರಿ ಸಾವು ನೋವುಗಳಾಗಿದ್ದು, ಈ ಒಂದು ನಗರ ದಲ್ಲೇ ಸಾವಿಗೀಡಾದವರ ಸಂಖ್ಯೆ 50 ದಾಟಿದೆ ಎಂದು ಅಂದಾಜಿಸಲಾ ಗಿದೆ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಇಂಡೋನೇಷ್ಯಾ ಸೇನೆ, ಸ್ಥಳೀಯ ಅಗ್ನಿಶಾಮಕ ದಳ ಗಳು, ನೈಸರ್ಗಿಕ ವಿಕೋಪ ನಿರ್ವ ಹಣಾ ಸಿಬ್ಬಂದಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಇನ್ನು ಭೂಕಂಪನದ ಬಳಿಕ ಕೆಲ ಪ್ರದೇಶ ಗಳಲ್ಲಿ ಲಘು ಭೂ ಕಂಪನ ಸಂಭವಿಸಿದ್ದು, ಸಂಭವಿಸಿರುವ ಭೂಕಂಪನದಿಂದಾಗಿ ಸಂಭಾವ್ಯ ಸುನಾಮಿ ಕುರಿತು ಹವಾಮಾನ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Translate »