ಕರುಣಾನಿಧಿ ಆರೋಗ್ಯ ಗಂಭೀರ
ಮೈಸೂರು

ಕರುಣಾನಿಧಿ ಆರೋಗ್ಯ ಗಂಭೀರ

August 7, 2018

ಚೆನ್ನೈ: ಡಿಎಂಕೆ ಪಕ್ಷದ ಅಧಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಆರೋಗ್ಯ ಗಂಭೀರವಾಗಿದೆ ಎಂದು ಮೂಲ ಗಳು ತಿಳಿಸಿವೆ.

ಜ್ವರ, ಮೂತ್ರ ನಾಳ ಸೋಂಕಿ ನಿಂದ ಬಳಲಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿರುವ ಎಂ.ಕರುಣಾನಿಧಿ ಅವರ ಆರೋಗ್ಯದಲ್ಲಿ ‘ಗಂಭೀರ ವ್ಯತ್ಯಯ’ವಾಗಿದೆ ಎಂದು ಕಾವೇರಿ ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಅಲ್ಲದೆ ಕರುಣಾನಿಧಿ ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ ಮುಂದುವರೆಸಲಾಗಿದ್ದು, ಅವರು ಮತ್ತೊಂದಷ್ಟು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ ಎಂದು ಹೇಳಿದೆ.

ಅಂತೆಯೇ ಅವರ ಅಭಿಮಾನಿ ಗಳಿಗೂ ಕಿವಿಮಾತು ಹೇಳಿರುವ ಆಸ್ಪತ್ರೆ ಆಡಳಿತ ಮಂಡಳಿ ಆಸ್ಪತ್ರೆಯಲ್ಲಿ ಕುರುಣಾನಿಧಿ ಅವರಿಗೆ
ಅತ್ಯುನ್ನತ ಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಪಷ್ಟ ಪಡಿಸಿದೆ. ಇನ್ನು ಕರುಣಾನಿಧಿ ಆರೋಗ್ಯ ಸುಧಾರಿಸಲಿ ಎಂದು ಹಾರೈಸಿ ಆಸ್ಪತ್ರೆ ಆವರಣದಲ್ಲೇ ಮೊಕ್ಕಾಂ ಹೂಡಿರುವ ಅವರ ಅಭಿಮಾನಿಗಳಿಗೆ ಈ ಸುದ್ದಿ ಆತಂಕಕ್ಕೆ ಕಾರಣವಾಗಿದೆ.

ನಿನ್ನೆಯಷ್ಟೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಚೆನ್ನೈನ ಕಾವೇರಿ ಆಸ್ಪತ್ರೆಗೆ ಆಗಮಿಸಿ ಕರುಣಾನಿಧಿ ಅವರ ಆರೋಗ್ಯ ವಿಚಾರಿಸಿದ್ದರು. 2016ರಿಂದಲೂ ಕರುಣಾನಿಧಿ ವಯೋ ಸಹಜ ಆನಾರೋಗ್ಯಕ್ಕೆ ತುತ್ತಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.

Translate »