ಕಳೆದ ವರ್ಷ 15 ಇ-ಶೌಚಾಲಯ ನಿರ್ಮಿಸಲಾಗಿತ್ತು ಬಯಲು ಶೌಚಮುಕ್ತಕ್ಕೆ ಕ್ರಮ ಬಹು ಬೇಡಿಕೆಯ ಸ್ಥಳಗಳಲ್ಲಿ ಜೋಡಣೆ – ಎಂ.ಟಿ.ಯೋಗೇಶ್ ಕುಮಾರ್ ಮೈಸೂರು: ಮೂರನೇ ಬಾರಿಯೂ ಸ್ವಚ್ಛನಗರಿಯ ಬಿರುದು ಪಡೆದಿರುವ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಹೊಸದಾಗಿ 12 ಇ-ಟಾಯ್ಲೆಟ್ ಅಳವಡಿಸುವುದಕ್ಕೆ ನಗರ ಪಾಲಿಕೆ ಉದ್ದೇಶಿಸಿದ್ದು, ಶೀಘ್ರದಲ್ಲಿಯೇ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಸ್ವಚ್ಛ ಸರ್ವೇಕ್ಷಣೆಯ ಹಿನ್ನೆಲೆಯಲ್ಲಿ ಮೈಸೂರು ನಗರಕ್ಕೆ ಸ್ವಚ್ಛ ನಗರಿ ಪಟ್ಟ ದೊರಕಿಸುವುದಕ್ಕಾಗಿ ಕಳೆದ ಬಾರಿ ಸ್ವಚ್ಛ ಸರ್ವೇಕ್ಷಣೆಯ ನಿಯಮಕ್ಕನುಸಾರವಾಗಿ ಮೈಸೂರಿನ ವಿವಿಧೆಡೆ 15 ಇ-ಟಾಯ್ಲೆಟ್ ನಿರ್ಮಿಸಲಾಗಿತ್ತು. ಕಳೆದು…