Tag: Elephant

ಮದವೇರಿದ ಲಕ್ಷ್ಮೀಶ ಆನೆ ಸೆರೆ ಸಿಕ್ಕರೂ ಕುಸಿದು ಸಾವು
ಮೈಸೂರು

ಮದವೇರಿದ ಲಕ್ಷ್ಮೀಶ ಆನೆ ಸೆರೆ ಸಿಕ್ಕರೂ ಕುಸಿದು ಸಾವು

September 19, 2018

ಮೈಸೂರು: ಮದವೇರಿದ್ದ ಗಂಡಾನೆಯೊಂದು ಸೆರೆಯಾದ ಬಳಿಕ ಮೃತಪಟ್ಟಿರುವ ಘಟನೆ ನಾಗರಹೊಳೆ ಕೊಲ್ಲಂಗೇರಿ ಅರಣ್ಯ ಪ್ರದೇಶದಲ್ಲಿ ವರದಿಯಾಗಿದೆ. ಮತ್ತಿಗೋಡು ಶಿಬಿರದಲ್ಲಿದ್ದ 23 ವರ್ಷದ ಲಕ್ಷ್ಮೀಶ ಎಂಬ ಆನೆ ಮಂಗಳವಾರ ಸಂಜೆ ಮೃತಪಟ್ಟಿದೆ. ಮದವೇರಿದ್ದ ಲಕ್ಷ್ಮೀಶ, ಆತಂಕ ಮೂಡಿಸಿದ್ದ. ಯಾವುದೇ ಕಾರಣಕ್ಕೂ ಜನವಸತಿ ಪ್ರದೇಶಕ್ಕೆ ಆನೆ ಹೋಗದಂತೆ ಎಚ್ಚರಿಕೆ ವಹಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಬೇರೆ ಆನೆಗಳ ಸಹಾಯ ದಿಂದ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದರು. ಕಡೆಗೂ ಲಕ್ಷ್ಮೀಶನನ್ನು ಸೆರೆಹಿಡಿದು, ಶಿಬಿರದತ್ತ ಕರೆತರುವ ಸಂದರ್ಭ ದಲ್ಲಿ ಇದ್ದಕ್ಕಿದ್ದಂತೆ ಕುಸಿದು ಮೃತಪಟ್ಟಿದೆ….

ವಿದ್ಯುತ್ ಸ್ಪರ್ಶ: ಹೆಣ್ಣಾನೆ ಸಾವು
ಚಾಮರಾಜನಗರ

ವಿದ್ಯುತ್ ಸ್ಪರ್ಶ: ಹೆಣ್ಣಾನೆ ಸಾವು

August 13, 2018

ಗುಂಡ್ಲುಪೇಟೆ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಹೆಣ್ಣಾನೆ ಯೊಂದು ಬೆಳೆ ರಕ್ಷಣೆಗೆ ಹಾಕಲಾಗಿದ್ದ ಅಕ್ರಮ ವಿದ್ಯುತ್ ಬೇಲಿಯ ಸ್ಪರ್ಶದಿಂದ ಸಾವಿಗೀಡಾ ಗಿರುವ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ನಡೆದಿದೆ. ಬಂಡೀಪುರ ಹುಲಿ ಯೋಜನೆಯ ಹೆಡಿಯಾಲ ಅರಣ್ಯ ವಲಯದ ದೊಡ್ಡಬರಗಿ ಗ್ರಾಮದ ಹೊರವಲಯದದಲ್ಲಿರುವ ಮಹೇಶ್ ಎಂಬುವರ ಜಮೀನಿನ ಬಳಿ ಅಕ್ರಮ ವಾಗಿ ಅಳವಡಿಸಿದ್ದ ವಿದ್ಯುತ್ ಸ್ಪರ್ಶದಿಂದ ಸುಮಾರು 25 ವರ್ಷ ವಯಸ್ಸಿನ ಹೆಣ್ಣಾನೆ ಸಾವಿಗೀಡಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿದೆ. ಸುದ್ದಿ ತಿಳಿದು ಸ್ಥಳಕ್ಕೆ…

Translate »