ಮೈಸೂರು: ಉದ್ಯಮಿಯಾಗಲು ಬಯಸಿ, ಹೊಸ ವ್ಯವಹಾರ ಪರಿಕಲ್ಪನೆ ಹೊಂದಿರುವವರಿಗೆ ಸೂಕ್ತ ಮಾರ್ಗದರ್ಶನ ನೀಡಲು `ವಿಪ್ರ ಪ್ರೊಫೆಷನಲ್ ಫೋರಂ’(ವಿಪಿಎಫ್), `ದಿ ಪಿಚ್’ ಎಂಬ ಸ್ಪರ್ಧಾ ಕಾರ್ಯಕ್ರಮ ರೂಪಿಸಿದೆ. ಇದರಲ್ಲಿ ಆಯ್ಕೆಯಾಗುವ 5 ಮಂದಿಗೆ ಉದ್ಯಮಿಯಾಗಲು ಅಗತ್ಯ ಮಾರ್ಗದರ್ಶನ ನೀಡಲಾಗುವುದು. ಫೆ.25ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ವಿಪಿಎಫ್ ನಿರ್ದೇಶಕ ಎಸ್.ವಿ.ವೆಂಕಟೇಶ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನವೋದ್ಯಮಿಗಳಾಗುವ ಅರ್ಹತೆ ಇರುವವರನ್ನು ಸ್ಪರ್ಧಾತ್ಮಕ ಚಟುವಟಿಕೆ ಮೂಲಕ ಗುರುತಿಸುವ ಉದ್ದೇಶ ಇದಾಗಿದೆ. ಮೈಸೂರಿನ ರ್ಯಾಡಿಸನ್ ಬ್ಲೂ ಪ್ಲಾಜಾ ಹೋಟೆಲ್ ನಲ್ಲಿ ಅಂದು ಬೆಳಿಗ್ಗೆ…