ಉದ್ಯಮಿ ಆಗಲಿಚ್ಛಿಸುವವರಿಗೆ ಫೆ.25ಕ್ಕೆ `ದಿ ಪಿಚ್’ ಸ್ಪರ್ಧೆ
ಮೈಸೂರು

ಉದ್ಯಮಿ ಆಗಲಿಚ್ಛಿಸುವವರಿಗೆ ಫೆ.25ಕ್ಕೆ `ದಿ ಪಿಚ್’ ಸ್ಪರ್ಧೆ

February 13, 2020

ಮೈಸೂರು: ಉದ್ಯಮಿಯಾಗಲು ಬಯಸಿ, ಹೊಸ ವ್ಯವಹಾರ ಪರಿಕಲ್ಪನೆ ಹೊಂದಿರುವವರಿಗೆ ಸೂಕ್ತ ಮಾರ್ಗದರ್ಶನ ನೀಡಲು `ವಿಪ್ರ ಪ್ರೊಫೆಷನಲ್ ಫೋರಂ’(ವಿಪಿಎಫ್), `ದಿ ಪಿಚ್’ ಎಂಬ ಸ್ಪರ್ಧಾ ಕಾರ್ಯಕ್ರಮ ರೂಪಿಸಿದೆ. ಇದರಲ್ಲಿ ಆಯ್ಕೆಯಾಗುವ 5 ಮಂದಿಗೆ ಉದ್ಯಮಿಯಾಗಲು ಅಗತ್ಯ ಮಾರ್ಗದರ್ಶನ ನೀಡಲಾಗುವುದು. ಫೆ.25ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ವಿಪಿಎಫ್ ನಿರ್ದೇಶಕ ಎಸ್.ವಿ.ವೆಂಕಟೇಶ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನವೋದ್ಯಮಿಗಳಾಗುವ ಅರ್ಹತೆ ಇರುವವರನ್ನು ಸ್ಪರ್ಧಾತ್ಮಕ ಚಟುವಟಿಕೆ ಮೂಲಕ ಗುರುತಿಸುವ ಉದ್ದೇಶ ಇದಾಗಿದೆ. ಮೈಸೂರಿನ ರ್ಯಾಡಿಸನ್ ಬ್ಲೂ ಪ್ಲಾಜಾ ಹೋಟೆಲ್ ನಲ್ಲಿ ಅಂದು ಬೆಳಿಗ್ಗೆ 9.30ಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಸಕ್ತರು ಫೆ.20ರೊಳಗೆ hಣಣಠಿ://vಠಿಜಿmಥಿsoಡಿe.ಛಿom/ಣhe-ಠಿiಣಛಿh ವೆಬ್‍ಸೈಟ್‍ನಲ್ಲಿ ನೋಂದಾಯಿಸಿ ಕೊಳ್ಳಬಹುದು. 200 ರೂ.ಗಳ ನೋಂದಣಿ ಶುಲ್ಕ ನಿಗದಿ ಮಾಡಲಾಗಿದೆ ಎಂದರು.

3 ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಿ 20 ಮಂದಿಯನ್ನು ಆಯ್ಕೆ ಮಾಡಲಾಗು ವುದು. ಇವರು ವಿಪಿಎಫ್ ಉದ್ಯಮಶೀಲ ಮಾರ್ಗದರ್ಶಕರ ಎದುರು ತಮ್ಮ ಉದ್ಯಮ ಶೀಲತಾ ಪ್ರಸ್ತಾಪ ಸಾದರಪಡಿಸಬೇಕು. ಇವರಲ್ಲಿ 3ರಿಂದ 5 ಮಂದಿಯನ್ನು ಆಯ್ಕೆ ಮಾಡ ಲಾಗುವುದು. ಇವರಿಗೆ ಪೂರ್ಣ ಪ್ರಮಾಣದಲ್ಲಿ ವ್ಯಾಪಾರ-ವಹಿವಾಟು ನಡೆಸಲು 2 ವರ್ಷ ಕಾಲ ಅಗತ್ಯ ಮಾರ್ಗದರ್ಶನ ನೀಡಲಾಗುವುದು. ವಿವರಗಳಿಗೆ ಮೊ.ಸಂ. 96202 07879 ಸಂಪರ್ಕಿಸಬಹುದು ಎಂದರು. ಸಂಸ್ಥೆಯ ಶಂಕರ್, ಸಮರ್ಥ್ ಗೋಷ್ಠಿಯಲ್ಲಿದ್ದರು.

Translate »