ಫೆ.25ರಂದು ಸಂತ ಶ್ರೀ ಸೇವಾಲಾಲ್ ಜಯಂತಿ
ಮೈಸೂರು

ಫೆ.25ರಂದು ಸಂತ ಶ್ರೀ ಸೇವಾಲಾಲ್ ಜಯಂತಿ

February 13, 2020

ಮೈಸೂರು: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಬಂಜಾರ(ಲಂಬಾಣಿ) ಸೇವಾ ಸಂಘದವರ ಸಂಯುಕ್ತಾಶ್ರಯದಲ್ಲಿ 281ನೇ ಸಂತ ಶ್ರೀ ಸೇವಾಲಾಲ್ ಜಯಂತಿಯನ್ನು ಫೆ.25ರಂದು ಸಂಜೆ 4 ಗಂಟೆಗೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಆಯೋ ಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸುವರು, ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮೇಯರ್ ತಸ್ನೀಂ, ಸಂಸದರಾದ ಪ್ರತಾಪ್‍ಸಿಂಹ, ವಿ.ಶ್ರೀನಿವಾಸ್ ಪ್ರಸಾದ್, ಸುಮಲತಾ ಅಂಬರೀಷ್, ಶಾಸಕ ತನ್ವೀರ್ ಸೇಠ್, ಶಾಸಕ ಜಿ.ಟಿ.ದೇವೇ ಗೌಡ, ಮರಿತಿಬ್ಬೇಗೌಡ, ಎಸ್.ಎ.ರಾಮದಾಸ್, ಕೆ.ವಿ.ನಾರಾಯಣಸ್ವಾಮಿ, ಅಶ್ವಿನ್ ಕುಮಾರ್, ಹರ್ಷವರ್ಧನ್, ಕೆ.ಮಹದೇವ್, ಸಿ.ಅನಿಲ್‍ಕುಮಾರ್, ಡಾ.ಯಂತೀಂದ್ರ, ಸಾ.ರಾ.ಮಹೇಶ್, ಎಸ್.ನಾಗರಾಜು, ಮರಿತಿಬ್ಬೇಗೌಡ, ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಂ, ಉಪ ಮೇಯರ್ ಸಿ.ಶ್ರೀಧರ್, ಜಿಪಂ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪ ರಾಮಯ್ಯ, ಉಪಾಧ್ಯಕ್ಷ ಎನ್.ಬಿ.ಮಂಜು, ಇತರ ಗಣ್ಯರು ಆಗಮಿಸುವರು.

Translate »