ನಾಳೆಯಿಂದ 2 ದಿನ ಬ್ಯಾಂಕಿಂಗ್ ವಿಚಾರ ಸಂಕಿರಣ
ಮೈಸೂರು

ನಾಳೆಯಿಂದ 2 ದಿನ ಬ್ಯಾಂಕಿಂಗ್ ವಿಚಾರ ಸಂಕಿರಣ

February 13, 2020

ಮೈಸೂರು: ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಹಾಗೂ ನಿರ್ವಹಣಾಶಾಸ್ತ್ರ ವಿಭಾಗದಿಂದ ಫೆ.14 ಮತ್ತು 15ರಂದು `ಬ್ಯಾಂಕಿಂಗ್, ಹಣಕಾಸು, ವಿಮಾ ಕ್ಷೇತ್ರಗಳ ಸುಧಾರಣೆ: ಸಮಸ್ಯೆಗಳು ಹಾಗೂ ಸವಾಲುಗಳು’ ಕುರಿತು 2 ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಎಸ್.ಮರೀಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾಲೇಜಿನ ಪಿ.ಎಂ.ಚಿಕ್ಕಬೋರಯ್ಯ ಸಭಾಂಗಣದಲ್ಲಿ ವಿಚಾರ ಸಂಕಿರಣ ನಡೆಯ ಲಿದೆ. ಫೆ.14ರ ಬೆಳಿಗ್ಗೆ 9.30ಕ್ಕೆ ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಂ.ರಾಮಚಂದ್ರಗೌಡ ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಿದ್ದಾರೆ. ಡೈರೆಕ್ಟ್ ಟ್ಯಾಕ್ಸ್ ಅಂಡ್ ಕಾರ್ಪೊರೇಟ್ ಟ್ಯಾಕ್ಸ್ ಸಮಿತಿ ಅಧ್ಯಕ್ಷ ಎನ್.ನಿತ್ಯಾನಂದ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

`ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು ಅಭಿವೃದ್ಧಿ: ತಾಂತ್ರಿಕ ಬದಲಾವಣೆಗಳಿಂದ ಒಂದು ಮಾದರಿ ಬದಲಾವಣೆ’, `ಡಿಜಿಟಲ್ ಯುಗದಲ್ಲಿ ಬ್ಯಾಂಕಿಂಗ್: ಸವಾಲುಗಳು ಮತ್ತು ಸಮಸ್ಯೆಗಳು’ ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿಚಾರ ಮಂಡನೆ ನಡೆಯ ಲಿದೆ. ಅಲ್ಲದೆ, ಬ್ಯಾಂಕಿಂಗ್ ವಿಷಯಕ್ಕೆ ಸಂಬಂಧಿಸಿ ಸಂಶೋಧನಾ ಪತ್ರಿಕೆಗಳ ಮಂಡನೆ ಅಧಿವೇಶನ ನಡೆಯಲಿದೆ. ಒಟ್ಟು 55 ಸಂಶೋಧನಾ ಪ್ರಬಂಧಗಳು ಮಂಡನೆಯಾಗ ಲಿವೆ ಎಂದರು. ಕಾಲೇಜಿನ ವಾಣಿಜ್ಯ-ನಿರ್ವಹಣಾ ವಿಭಾಗದ ಮುಖ್ಯಸ್ಥೆ ಪ್ರೊ.ಬಿ.ಎಂ. ಮಂಜುಳಾ, ಅಧ್ಯಾಪಕರಾದ ಎಸ್.ಸಿ.ರುಕ್ಮಿಣಿ, ಎಸ್.ಶಶಿಧರ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »