ನೂತನ ಸಚಿವರಿಗೆ ಖಾತೆ ಹಂಚಿಕೆ
ಮೈಸೂರು

ನೂತನ ಸಚಿವರಿಗೆ ಖಾತೆ ಹಂಚಿಕೆ

February 11, 2020

ಬೆಂಗಳೂರು,ಫೆ.10-ವಿಧಾನಸಭೆ ಉಪ ಚುನಾ ವಣೆಯಲ್ಲಿ ಗೆಲುವು ಸಾಧಿಸಿದ 10 ಶಾಸಕರನ್ನು ಫೆಬ್ರ ವರಿ 6ರಂದು ಸಂಪುಟಕ್ಕೆ ಸೇರಿಸಿಕೊಂಡ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಅವರೆಲ್ಲ ರಿಗೂ ನಾಲ್ಕು ದಿನಗಳ ನಂತರ ಸೋಮವಾರ ಖಾತೆ ಹಂಚಿಕೆ ಮಾಡಿದ್ದಾರೆ. ಅದೇ ವೇಳೆ ಹಾಲಿ ಶಾಸಕರಾಗಿ ದ್ದವರ ಕೆಲವು ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್ ನಿಭಾಯಿಸುತ್ತಿದ್ದ ಜಲಸಂಪ ನ್ಮೂಲ ಖಾತೆಯೇ ಬೇಕೆಂದು ಪಟ್ಟು ಹಿಡಿದಿದ್ದ ರಮೇಶ್ ಜಾರಕಿಹೊಳಿ, ಅದರಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿ ದಂತೆ ಆರೋಗ್ಯ ಖಾತೆ ಬಯಸಿದ್ದ ಡಾ.ಕೆ.ಸುಧಾ ಕರ್, ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದ ಭೈರತಿ ಬಸವರಾಜ್ ಮತ್ತು ಎಸ್.ಟಿ. ಸೋಮ ಶೇಖರ್ ಪಿಡಬ್ಲ್ಯೂಡಿ ಅಥವಾ ಇಂಧನ ಖಾತೆ ಬಯಸಿದ್ದ ಬಿ.ಸಿ.ಪಾಟೀಲ್ ಅವರಿಗೆ ನಿರಾಸೆಯಾ ಗಿದೆ. ಇವರಲ್ಲಿ ಬಿ.ಸಿ.ಪಾಟೀಲ್, ಭೈರತಿ ಬಸವರಾಜ್ ಮತ್ತು ಎಸ್.ಟಿ.ಸೋಮಶೇಖರ್ ತಮಗೆ ದೊರೆತಿ ರುವ ಖಾತೆಗಳು ತೃಪ್ತಿ ತಂದಿದೆ ಎಂದು ಹೇಳಿದ್ದರೆ, ಡಾ. ಸುಧಾಕರ್ ಅವರು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಗೆಡವಿದ್ದಾರೆ.

ನೂತನ ಸಚಿವರಾದ ರಮೇಶ್ ಜಾರಕಿಹೊಳಿ ಅವರಿಗೆ ಜಲಸಂಪನ್ಮೂಲ, ಬಿ.ಸಿ.ಪಾಟೀಲ್ ಅವರಿಗೆ ಅರಣ್ಯ, ಎಸ್.ಟಿ.ಸೋಮಶೇಖರ್ ಅವರಿಗೆ ಸಹಕಾರ, ಭೈರತಿ ಬಸವರಾಜ್ ಅವರಿಗೆ ನಗರಾಭಿವೃದ್ಧಿ, ಡಾ.ಕೆ.ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ, ಕೆ.ಗೋಪಾಲಯ್ಯ ಅವ ರಿಗೆ ಸಣ್ಣ ಕೈಗಾರಿಕೆ ಮತ್ತು ಸಕ್ಕರೆ, ಶಿವರಾಂ ಹೆಬ್ಬಾರ್ ಅವರಿಗೆ ಕಾರ್ಮಿಕ, ಶ್ರೀಮಂತ ಪಾಟೀಲ್ ಅವರಿಗೆ ಜವಳಿ, ಕೆ.ಸಿ.ನಾರಾಯಣಗೌಡ ಅವರಿಗೆ ಪೌರಾಡಳಿತ ಮತ್ತು ತೋಟಗಾರಿಕೆ, ಆನಂದ್‍ಸಿಂಗ್ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಗಳನ್ನು ನೀಡಲಾಗಿದೆ.

ತೀವ್ರ ಪೈಪೋಟಿಗೆ ಒಳಗಾಗಿದ್ದ ಬೆಂಗಳೂರು ನಗರಾ ಭಿವೃದ್ಧಿ ಖಾತೆಯನ್ನು ಮುಖ್ಯಮಂತ್ರಿಯವರು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಹಿಂಪಡೆದು ಅವರಿಗೆ ಕೌಶಲಾಭಿವೃದ್ಧಿ ಖಾತೆ ನೀಡಲಾಗಿದೆ.

ವಿ.ಸೋಮಣ್ಣ ಬಳಿ ಹೆಚ್ಚುವರಿಯಾಗಿ ಇದ್ದ ತೋಟಗಾರಿಕೆ ಖಾತೆಯನ್ನು ಹಿಂಪಡೆ ದಿದ್ದು, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರಿಗೆ ಯುವಜನ ಮತ್ತು ಕ್ರೀಡಾ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ತಮ್ಮ ಆಪ್ತ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಕೃಷಿ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ಮುಂದಿನ ದಿನಗಳಲ್ಲಿ ಮೂಲ ಬಿಜೆಪಿಯ ಹಿರಿಯ ಶಾಸಕರನ್ನು ಸಂಪುಟಕ್ಕೆ ಸೇರಿಸಿ ಕೊಂಡಾಗ ಅವರಿಗೆ ಪ್ರಮುಖ ಖಾತೆಗಳನ್ನು ಕೊಡಬೇಕಾಗುತ್ತದೆ ಎಂಬ ದೂರದೃಷ್ಟಿ ಯಿಂದ ಮುಖ್ಯಮಂತ್ರಿಗಳು ತಮ್ಮ ಬಳಿ ಬೆಂಗಳೂರು ನಗರಾಭಿವೃದ್ಧಿ, ಇಂಧನ, ಹಣಕಾಸು, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ, ಗುಪ್ತಚರ, ಡಿಪಿಆರ್‍ಎ ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಅಲ್ಲದೇ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಬಳಿ ಹೆಚ್ಚುವರಿಯಾಗಿ ಸಮಾಜ ಕಲ್ಯಾಣ ಇಲಾಖೆ, ಡಾ. ಸಿ.ಎನ್. ಅಶ್ವತ್ಥ್‍ನಾರಾಯಣ ಬಳಿ ಕೌಶಲಾಭಿವೃದ್ಧಿ, ಜಗದೀಶ್ ಶೆಟ್ಟರ್ ಬಳಿ ಸಾರ್ವಜನಿಕ ಉದ್ದಿಮೆ, ಶ್ರೀರಾಮುಲು ಬಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜೆ.ಸಿ. ಮಾಧುಸ್ವಾಮಿ ಬಳಿ ಸಣ್ಣ ನೀರಾವರಿ, ಪ್ರಭು ಚವ್ಹಾಣ್ ಬಳಿ ಅಲ್ಪಸಂಖ್ಯಾತ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿಯಾಗಿ ಇದೆ. ಆರೋಗ್ಯ ಇಲಾಖೆ ನಿರೀಕ್ಷಿಸಿದ್ದ ತಮಗೆ ವೈದ್ಯಕೀಯ ಶಿಕ್ಷಣ ಇಲಾಖೆ ಬಗ್ಗೆ ಡಾ.ಕೆ.ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು. ತಾವು ಮತ್ತು ಮುಖ್ಯಮಂತ್ರಿಗಳ ನಡುವೆ ನಡೆದ ಮಾತುಕತೆಯೇ ಬೇರೆ, ಈಗ ನೀಡಿರುವ ಖಾತೆಯೇ ಬೇರೆ ಎಂದಿರುವ ಅವರು, ಈ ಸಂಬಂಧ ಮುಖ್ಯಮಂತ್ರಿಗಳ ಜೊತೆ ಮಾತನಾಡಲಿರುವುದಾಗಿ ಹೇಳಿದರು.

ಮೂಲ ಬಿಜೆಪಿ ಶಾಸಕರಲ್ಲಿ ಮತ್ತೊಮ್ಮೆ ಅಸಮಾಧಾನ ಬಹಿರಂಗ
ಬೆಂಗಳೂರು, ಫೆ.10- ನೂತನ ಸಚಿವರಿಗೆ ಖಾತೆ ಹಂಚಿಕೆ ಬೆನ್ನಲ್ಲೇ ಸಚಿವ ಸ್ಥಾನ ವಂಚಿತ ಮೂಲ ಬಿಜೆಪಿ ಶಾಸಕರಲ್ಲಿ ಅಸಮಾಧಾನವಿದೆ ಎಂದು ವಿಜಯಪುರ ಶಾಸಕ ಬಸವರಾಜ ಯತ್ನಾಳ್ ಬಹಿರಂಗವಾಗಿ ಹೇಳಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಇನ್ನೂ ಮೂರೂ ವರ್ಷ ಕಾಲ ಉತ್ತಮವಾದ ಆಡಳಿತ ನೀಡಲಿ ಎಂದಿರುವ ಯತ್ನಾಳ್, ಮುಖ್ಯಮಂತ್ರಿಗಳ ಸಂಪುಟದಲ್ಲಿ ಪ್ರಾದೇಶಿಕ ಅಸಮತೋಲನವಿದೆ. ಬೆಂಗಳೂರು ಮತ್ತು ಬೆಳಗಾವಿಗೆ ಸಂಪುಟದಲ್ಲಿ ಸಿಂಹಪಾಲು ನೀಡಿರುವುದು ಸರಿಯಲ್ಲ ಎಂದಿದ್ದಾರೆ.

ಬಿಜೆಪಿಯಿಂದ ಗೆದ್ದಿರುವ ಹಿರಿಯ ಶಾಸಕರಲ್ಲಿ ಅಸಮಾಧಾನವಿದೆ ಎಂದಿರುವ ಅವರು, 15ರಿಂದ 17 ಶಾಸಕರು ಅಸಮಾಧಾನಗೊಂಡಿದ್ದು, ತಮ್ಮ ಜೊತೆ ಚರ್ಚಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ತಕ್ಷಣವೇ ಶಾಸಕಾಂಗ ಪಕ್ಷದ ಸಭೆ ಕರೆದು ನಮ್ಮ ಭಾವನೆ ಗಳಿಗೆ ಸ್ಪಂದಿಸಬೇಕು. ನಮ್ಮ ಅಹವಾಲುಗಳನ್ನೂ ಆಲಿಸಬೇಕು ಎಂದು ಆಗ್ರಹಿಸಿದ್ದಾರೆ. ಸಂಪುಟದಲ್ಲಿ ಪ್ರಾದೇಶಿಕ ಅಸಮತೋಲನವಿದ್ದು, ಹಲವಾರು ಜಿಲ್ಲೆ ಗಳಿಗೆ ಪ್ರಾತಿನಿಧ್ಯ ದೊರೆತಿಲ್ಲ. ಈ ಜಿಲ್ಲೆಗಳಿಗೆ ಹೊರಗಿ ನವರು ಉಸ್ತುವಾರಿ ಮಂತ್ರಿಗಳಾಗಿ ಬಂದರೆ ಅವರು ಕೇವಲ ಅತಿಥಿಗಳಾಗುತ್ತಾರೆಯೇ ಹೊರತು ಜಿಲ್ಲೆಯ ಸಮಗ್ರ ಅಭಿವೃದ್ಧಿ ಕಡೆ ಗಮನಹರಿಸುತ್ತಾರೆ ಎಂದು ಹೇಳಲಾಗದು. ಅಲ್ಲದೇ, ಮೂರ್ನಾಲ್ಕು ಬಾರಿ ಗೆದ್ದಿ ರುವ ಹಿರಿಯ ಶಾಸಕರು ಸಚಿವ ಸ್ಥಾನ ಸಿಗದೆ ಏನಾಗಬೇಕು ಎಂಬ ಪ್ರಶ್ನೆ ಮೂಡುತ್ತದೆ. ಅವರು ಕುಗ್ಗುವಂತೆ ಆಗುತ್ತದೆ. ಇದನ್ನು ಮುಖ್ಯಮಂತ್ರಿಗಳು ಸರಿಪಡಿಸಬೇಕಾಗಿದೆ ಎಂದು ಹೇಳಿದರು.

ಸಂಪುಟ ವಿಸ್ತರಣೆ ವಿಷಯದಲ್ಲಿ ಪಕ್ಷದ ವರಿಷ್ಠರು ಮುಖ್ಯಮಂತ್ರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಈಗ ಆಗಿರುವ ವ್ಯತ್ಯಾಸಗಳಿಗೆ ಮುಖ್ಯಮಂತ್ರಿಗಳೇ ಕಾರಣರಾಗಿದ್ದು, ಅವರೇ ಎಲ್ಲವನ್ನೂ ಸರಿಪಡಿಸಬೇಕು. ನಾವು ಈ ಬಗ್ಗೆ ಮಾತನಾಡುತ್ತಿರುವುದು ಪಕ್ಷ ಮತ್ತು ಸರ್ಕಾರದ ಹಿತದೃಷ್ಟಿಯಿಂದಲೇಹೊರತು, ಇದು ಬಂಡಾಯವಲ್ಲ ಎಂದು ಸ್ಪಷ್ಟಪಡಿಸಿದರು. ಮತ್ತೊಂದೆಡೆ ಹಿರಿಯ ಶಾಸಕ ಉಮೇಶ್ ಕತ್ತಿಯವರು ಯಡಿಯೂರಪ್ಪನವರೇ ತಮ್ಮ ಸ್ಥಾನವನ್ನು ಬಿಟ್ಟು ಕೊಡಲಿ ಎಂಬ ಧಾಟಿಯಲ್ಲಿ ಮಾತನಾಡುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ಸಚಿವರಾಗಿರುವವರೆಲ್ಲರೂ ನಮಗಿಂತ ಅನುಭವಸ್ಥರು ಎಂದು ವ್ಯಂಗ್ಯವಾಗಿ ನುಡಿದರು. ನನಗೆ ಸಚಿವನಾಗುವ ಅರ್ಹತೆಯೂ ಇದೆ, ಅನುಭವವೂ ಇದೆ. ಆದರೆ, ಸಚಿವನಂತೂ ಆಗಿಲ್ಲ. ಮುಖ್ಯಮಂತ್ರಿ ಆಗುವಂತಹ ಅನುಭವವೂ ನನಗಿದ್ದು, ಸಿಎಂ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ. ದೇವರ ಆಶೀರ್ವಾದ ಇದ್ದರೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಅವರು ಹೇಳಿದರು.

Translate »