ಮೈಸೂರು: ಕೌಟುಂಬಿಕ ಕಲಹಕ್ಕೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ಮೈಸೂರಿನ ಗಾಯತ್ರಿಪುರಂನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಗಾಯತ್ರಿಪುರಂ ನಿವಾಸಿ ಝರೀನ ತಾಜ್(56) ಸಾವನ್ನಪ್ಪಿದವರು. ಕೌಟುಂಬಿಕ ಕಲಹದಲ್ಲಿ ಉಂಟಾದ ನೂಕಾಟ-ತಳ್ಳಾಟದಲ್ಲಿ ಆಯ ತಪ್ಪಿ ಬಿದ್ದು ಗಾಯಗೊಂಡಿದ್ದ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ 9.30 ಗಂಟೆ ವೇಳೆಗೆ ಕೊನೆಯುಸಿರೆಳೆದಿದ್ದಾರೆ. ಝರೀನ ತಾಜ್‍ಳ ಸಹೋದರ ಮಹಮದ್ ರಫಿ ಎಂಬುವರ ಪುತ್ರಿ ಮುಸ್ಕಾನರನ್ನು ಒಂದೂವರೆ ವರ್ಷದ ಹಿಂದೆ ಸೈಯ್ಯದ್ ಸಲ್ಮಾನ್‍ಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ತದನಂತರ…