ಮೈಸೂರು: ಕಟ್ಟಿ ನಿಲ್ಲಿಸಿ ಉದ್ಘಾಟಿಸುವುದಕ್ಕೆ ಎಲ್ಲಿಲ್ಲದ ಉತ್ಸಾಹ. ಬಳಸಿಕೊಳ್ಳಲೇಕೊ ನಿರುತ್ಸಾಹ! ಇದರ ಪರಿಣಾಮ ಲಕ್ಷಾಂತರ ಹಣ ವ್ಯಯಿಸಿ ನಿರ್ಮಿಸಿದ ಕಟ್ಟಡಗಳು ಹಾಳು ಕೊಂಪೆಗಳಾಗುತ್ತಿವೆಯೇ ಹೊರತು ಬಳಕೆಗೆ ಮಾತ್ರ ಬಾರದಾಗಿವೆ. ಮೈಸೂರಿನ ವಿಜಯನಗರದ 2ನೇ ಹಂತದಲ್ಲಿರುವ ರೈತ ಸಂತೆ ಕಟ್ಟಡ ಸೇರಿದಂತೆ ಮೈಸೂರು ನಗರದ ವಿವಿಧ ಭಾಗಗಳಲ್ಲಿ ನಿರ್ಮಿಸಿರುವ ಕಿರು ಮಾರುಕಟ್ಟೆಗಳು ಹಲವು ವರ್ಷಗಳಿಂದ ಪ್ರಯೋಜನಕ್ಕೆ ಬಾರದಾಗಿವೆ. ಇದಕ್ಕೆ ಕಾರಣ, ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದ ನಿರ್ಲಕ್ಷ್ಯ ಎಂಬುದು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿರುವ ಆರೋಪ. ರೈತ…