ಕುಶಾಲನಗರ: ದೇಶದ ಸಂಪತ್ತಾಗಿರುವ ಅರಣ್ಯ ಪ್ರದೇಶಕ್ಕೆ ಯಾವುದೇ ಕಾರಣಕ್ಕೂ ಬೆಂಕಿ ತಗು ಲದಂತೆ ಅರಣ್ಯ ರಕ್ಷಕರು ಎಚ್ಚರಿಕೆ ವಹಿಸ ಬೇಕಾಗಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಮಂಜು ನಾಥ್ ಹೇಳಿದರು. ಇಲ್ಲಿನ ಗಂಧದಕೋಟಿಯಲ್ಲಿರುವ ಅರಣ್ಯ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ 2017-18ನೇ ಸಾಲಿನ 88ನೇ ತಂಡದ ಅರಣ್ಯ ರಕ್ಷಕರ ಬುನಾದಿ ತರ ಬೇತಿ ಶಿಬಿರದ ಸಾಮರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ಉಜ್ವಲ ಯೋಜನೆಯಡಿ ಎಲ್ಲ ರಿಗೂ ಉಚಿತ ಗ್ಯಾಸ್ ಸಿಲೆಂಡರ್…