ಮೈಸೂರು: ಯಾವುದೇ ರಹದಾರಿ ಇಲ್ಲದೆ ಚೀಟಿ ವ್ಯವಹಾರ ನಡೆಸಿ, ಸಾಕಷ್ಟು ಜನರಿಗೆ ಲಕ್ಷಾಂತರ ರೂ. ವಂಚಿಸಿದ ಮೈಸೂರಿನ ಶ್ರೀರಾಂಪುರದ ಎನ್.ಗುರುಮೂರ್ತಿ ಉರುಫ್ ರಾಜು, ಅವರ ಪತ್ನಿ ಪ್ರೀತಿ, ಬಾಮೈದ ಮಂಜು ಹಾಗೂ ಅಳಿಯ ಶಶಿಕುಮಾರ್ ವಿರುದ್ಧ ಅಶೋಕಪುರಂ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಚೀಟಿಯಿಂದ ಹಣ ಕಳೆದುಕೊಂಡು ನೊಂದ ಹಲವರು ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರೈಲ್ವೆ ಇಲಾಖೆಯ ನಿವೃತ್ತ ನೌಕರ ಶ್ರೀರಾಂಪುರದ ಟಿ.ಎಸ್.ಹನುಮಂತರಾಯಪ್ಪ, ಶ್ರೀರಾಂಪುರದ ಆನಂದ ಬಸವರಾಜು, ರುದ್ರಪ್ಪಸ್ವಾಮಿ, ವಿಜಯನಗರ 2ನೇ…