ಮೈಸೂರು: ಅಪರಿಚಿತರಿಬ್ಬರು ಹಾಡಹಗಲೇ ವೃದ್ಧೆಯೊಬ್ಬರಿಗೆ ವಂಚಿಸಿ, ಸುಮಾರು ಒಂದು ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿರುವ ಘಟನೆ ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೈಸೂರಿನ ಜೆ.ಪಿ.ನಗರದ ನಿವಾಸಿ ಪುಟ್ಟಮ್ಮ(55), ನಕಲಿ ಚಿನ್ನಾಭರಣಕ್ಕೆ ಆಸೆ ಬಿದ್ದು, ವಂಚನೆಗೊಳಗಾಗಿ ಸುಮಾರು 38 ಗ್ರಾಂ ತೂಕದ ತಮ್ಮ ಅಸಲಿ ಚಿನ್ನಾಭರಣವನ್ನು ಕಳೆದುಕೊಂಡಿದ್ದಾರೆ. ಪುಟ್ಟಮ್ಮ ಅವರು ಜೂ.26ರಂದು ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಗಾಂಧೀ ವೃತ್ತದ ಸಮೀಪ ಸುಮಂಗಲಿ ಸಿಲ್ಕ್ಸ್ ಬಳಿ ನಡೆದುಕೊಂಡು ಬರುತ್ತಿದ್ದರು. ಆಗ ಎದುರಾದ…