ಗುಂಡ್ಲುಪೇಟೆ: ಹಿಂದುಗಳ ಪವಿತ್ರಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿಯನ್ನು ಪಟ್ಟಣ ಹಾಗೂ ತಾಲೂಕಿನಾದ್ಯಂತ ಅತ್ಯಂತ ವಿಜೃಂಭಣೆ ಯಿಂದ ಆಚರಣೆ ಮಾಡಲಾಯಿತು. ಪಟ್ಟಣದಲ್ಲಿರುವ ದ.ರಾ.ಬೇಂದ್ರೆ ನಗರ ದಲ್ಲಿರುವ ಸರ್ವಶಕ್ತಿ ಸಿದ್ಧಿವಿನಾಯಕ ದೇವಾ ಲಯ, ಬಲಮುರಿ ಗಣಪತಿ ದೇವಾಲಯ, ಪ್ರಸನ್ನ ಗಣಪತಿ ದೇವಾಲಯ, ಶ್ರೀರಾಮೇ ಶ್ವರ ದೇವಾಲಯ, ಅರಳೀಕಟ್ಟೆ ಗಣಪತಿ ದೇವಾಲಯ ಸೇರಿದಂತೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿರುವ ಆನಂದ ಗಣಪತಿ ದೇವಾಲಯಗಳಲ್ಲಿ ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ತಳಿರು ತೋರಣ ಮತ್ತು ದೀಪಾಲಂಕಾರದೊಂದಿಗೆ ಅಲಂಕಾರಿಕ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಗಣೇಶ ಚತುರ್ಥಿಯ ಅಂಗವಾಗಿ ವಿಶೇಷ…