ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ
ಚಾಮರಾಜನಗರ

ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ

September 15, 2018

ಗುಂಡ್ಲುಪೇಟೆ:  ಹಿಂದುಗಳ ಪವಿತ್ರಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿಯನ್ನು ಪಟ್ಟಣ ಹಾಗೂ ತಾಲೂಕಿನಾದ್ಯಂತ ಅತ್ಯಂತ ವಿಜೃಂಭಣೆ ಯಿಂದ ಆಚರಣೆ ಮಾಡಲಾಯಿತು.

ಪಟ್ಟಣದಲ್ಲಿರುವ ದ.ರಾ.ಬೇಂದ್ರೆ ನಗರ ದಲ್ಲಿರುವ ಸರ್ವಶಕ್ತಿ ಸಿದ್ಧಿವಿನಾಯಕ ದೇವಾ ಲಯ, ಬಲಮುರಿ ಗಣಪತಿ ದೇವಾಲಯ, ಪ್ರಸನ್ನ ಗಣಪತಿ ದೇವಾಲಯ, ಶ್ರೀರಾಮೇ ಶ್ವರ ದೇವಾಲಯ, ಅರಳೀಕಟ್ಟೆ ಗಣಪತಿ ದೇವಾಲಯ ಸೇರಿದಂತೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿರುವ ಆನಂದ ಗಣಪತಿ ದೇವಾಲಯಗಳಲ್ಲಿ ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ತಳಿರು ತೋರಣ ಮತ್ತು ದೀಪಾಲಂಕಾರದೊಂದಿಗೆ ಅಲಂಕಾರಿಕ ಪುಷ್ಪಗಳಿಂದ ಸಿಂಗರಿಸಲಾಗಿತ್ತು.

ಗಣೇಶ ಚತುರ್ಥಿಯ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಿತು. ಬೆಳಗ್ಗೆಯಿಂದಲೇ ಸಾರ್ವಜನಿಕರು ದೇವಾ ಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಗಲ್ಲಿಗಲ್ಲಿಗಳಲ್ಲಿಯೂ ಗಣಪ: ಪಟ್ಟಣದ ಪ್ರಮುಖ ಆಕರ್ಷಣೆಗಳಲ್ಲೊಂದಾದ ದೊಡ್ಡ ಗಣಪತಿಯೆಂದೇ ಹೆಸರುವಾಸಿ ಯಾಗಿರುವ ಅಂಗಡಿ ಬೀದಿ ಗಣಪತಿ ಈ ಬಾರಿ ಆಕರ್ಷಣೆಯ ಕೇಂದ್ರ ಬಿಂದು ವಾಗಿದೆ. ಕೆ.ಆರ್.ಸಿ.ರಸ್ತೆಯ ಅಂಗಡಿ ಬೀದಿ ಯಲ್ಲಿ 53ನೇ ವರ್ಷದ ಪ್ರಯುಕ್ತ ಪ್ರತಿ ಷ್ಠಾಪಿಸಿರುವ ಜಟಾಯು ಪಕ್ಷಿಯ ಹಿನ್ನೆ ಲೆಯಲ್ಲಿರುವ ಹನ್ನೊಂದು ಅಡಿ ಎತ್ತರದ ಬಿಳಿ ಬಣ್ಣದ ದಿರಿಸಿನಲ್ಲಿ ಮಿಂಚುತ್ತಿರುವ ಗಣಪತಿ ಸಾರ್ವಜನಿಕರ ಕಣ್ಮನ ಸೆಳೆಯುತ್ತಿದೆ.

ಇದಲ್ಲದೇ ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿಯೂ ಸಹ ಸಣ್ಣ ಸಣ್ಣ ಹಸಿರು ಮಂಟ ಪಗಳನ್ನು ಕಟ್ಟಿರುವ ಮಕ್ಕಳು ಹಿರಿಯರ ಸಹಾಯ ದೊಂದಿಗೆ ಪುಟ್ಟ ಪುಟ್ಟ ಗಣಪತಿಯ ಮೂರ್ತಿಗಳನ್ನು ಇಟ್ಟು ಪೂಜೆ ಸಲ್ಲಿಸುವುದ ರೊಂದಿಗೆ ಸಂಭ್ರಮ ಮತ್ತು ಸಡಗರದಿಂದ ಗಣಪತಿ ಹಬ್ಬವನ್ನು ಆಚರಣೆ ಮಾಡಿದರು.

Translate »