ಲಾರಿ ಡಿಕ್ಕಿ; ಇಬ್ಬರು ಯುವಕರ ಸಾವು
ಚಾಮರಾಜನಗರ

ಲಾರಿ ಡಿಕ್ಕಿ; ಇಬ್ಬರು ಯುವಕರ ಸಾವು

September 15, 2018

ಕೊಳ್ಳೇಗಾಲ: ಕಬ್ಬಿನ ಲಾರಿಯೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿ ಣಾಮ ಇಬ್ಬರು ಯುವಕರು ಸಾವಿ ಗೀಡಾಗಿ, ಮತ್ತೊಬ್ಬರು ತೀವ್ರ ರೀತಿಯಲ್ಲಿ ಗಾಯಗೊಂಡು ಮೈಸೂರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗ್ರಾಮಾಂ ತರ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಮಾಂಬಳ್ಳಿ ಗ್ರಾಮದ ಶಿವಕುಮಾರ್ (24), ಸತೀಶ್ (23) ಸಾವೀಗಿಡಾದ ಯುವಕರು. ಮತ್ತೋರ್ವ ಕಾರ್ತಿಕ್ (22) ಎಂಬುವರಿಗೂ ಸಹ ತೀವ್ರ ಪೆಟ್ಟಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಲ ಕವಾಡಿಯಿಂದ ಮಾಂಬಳ್ಳಿ ಗ್ರಾಮಕ್ಕೆ ತೆರಳಲು ಬೈಕ್‍ನಲ್ಲಿ ಆಗಮಿಸುತ್ತಿದ್ದ ವೇಳೆ ಕುಂತೂರು ಕ್ರಾಸ್ ಬಳಿ ಬಂದ ಕಬ್ಬಿನ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಲಾರಿ ಡಿಕ್ಕಿ ಹೊಡೆದ ಪರಿಣಾಮ ಶಿವಕುಮಾರ್ ಸ್ಥಳದಲ್ಲೆ ಸಾವಿಗೀಡಾದರು. ತಕ್ಷಣ ಗಾಯಾಳುಗಳನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವೇಳೆ ಸತೀಶ್ ಸಹಾ ಸಾವಿಗೀಡಾದರು ಎನ್ನಲಾಗಿದೆ. ತೀವ್ರ ಪೆಟ್ಟಾದ ಹಿನ್ನೆಲೆ ಮತ್ತೋರ್ವ ಕಾರ್ತಿಕ್ ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿ ಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತರ ಬಂಧುಗಳ ರೋಧನ ಮುಗಿಲು ಮುಟ್ಟುವಂತಿತ್ತು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ರಾಜಣ್ಣ. ಪಿಎಸೈ ವನರಾಜು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »